ಜ್ಞಾನದ ಆಟ: ಯುವವಾಹಿನಿ(ರಿ) ಕೆಂಜಾರು ಕರಂಬಾರು ವತಿಯಿಂದ ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ - Mahanayaka
10:07 AM Wednesday 12 - March 2025

ಜ್ಞಾನದ ಆಟ: ಯುವವಾಹಿನಿ(ರಿ) ಕೆಂಜಾರು ಕರಂಬಾರು ವತಿಯಿಂದ ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ

mangalore
25/01/2025

ಮಂಗಳೂರು:  ಉತ್ತರ ವಲಯದ 5 ಸರಕಾರಿ ಶಾಲೆಗಳಾದ ಕಾವೂರು,ಕರಂಬಾರು, ಕೆಂಜಾರು, ಜೋಕಟ್ಟೆ, ಸಿದ್ದಾರ್ಥ ನಗರ ಶಾಲೆಗಳ ವಿದ್ಯಾರ್ಥಿಗಳಿಗೆ ಕರಂಬಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನದ ಆಟ ಎಂಬ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಶಾಲೆಯ ಮುಖೋಪಧ್ಯಾಯಿನಿ ಉಷಾ ಕಿರಣ್ ಮಾತನಾಡುತ್ತಾ,  ಯುವವಾಹಿನಿಯ ಧ್ಯೇಯದ ಮೊದಲ ಪದವೇ ವಿದ್ಯೆ,  ಅದೇ ರೀತಿಯಲ್ಲಿ ಸರಕಾರಿ ಶಾಲೆಯ ಮಕ್ಕಳಲ್ಲಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದಂತಹ ಹಾಗೂ  ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಲೆಯ ಜೊತೆ ಸಂಸ್ಥೆಯು ಕೈ ಜೋಡಿಸಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಸಭಾ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಿನೋದ್ ಕುಮಾರ್ ಅರ್ಬಿ ವಹಿಸಿದ್ದರು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಸಿದ್ದಾರ್ಥ ನಗರ, ಜೋಕಟ್ಟೆ, ಕೆಂಜಾರು, ಕಾವೂರು ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು.


Provided by

ಸಭಾ ಕಾರ್ಯಕ್ರಮ ಹಾಗೂ ರಸಪ್ರಶ್ನೆ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಗೀತಾ ರವರು ನಿರ್ವಹಿಸಿದರು. ಯುವವಾಹಿನಿ ಘಟಕದ ಕಾರ್ಯದರ್ಶಿ ಮಿಥುನ್ ಕುಮಾರ್ ಅವರು ಧನ್ಯವಾದ ಸಮರ್ಪಿಸಿದರು. ರಸಪ್ರಶ್ನೆಯಲ್ಲಿ ಕಾವೂರು ಶಾಲೆ ಪ್ರಥಮ, ಜೋಕಟ್ಟೆ ಶಾಲೆ ದ್ವಿತೀಯ ಹಾಗೂ ಸಿದ್ದಾರ್ಥ ನಗರ ಶಾಲೆ ತೃತೀಯ ಬಹುಮಾನ ಪಡೆದುಕೊಂಡರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ