ಗಣತಂತ್ರ ಉಳಿಸಲು ಹೋರಾಡುತ್ತಿರುವ ರೈತರು ನಮಗೆ ಸ್ಫೂರ್ತಿಯಾಗಲಿ | ಸಿದ್ದರಾಮಯ್ಯ
26/01/2021
ಬೆಂಗಳೂರು: ಗಣತಂತ್ರ ಉಳಿಸಲು ಹೋರಾಡುತ್ತಿರುವ ರೈತರು ನಮಗೆಲ್ಲ ಸ್ಪೂರ್ತಿಯಾಗಲಿ ಎಂದು ಗಣರಾಜ್ಯೋತ್ಸವ(ಸಂವಿಧಾನ ದಿನಾಚರಣೆ) ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಶಿಸಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಟ್ವೀಟ್ ಮಾಡಿರುವ ಅವರು, ಗಣತಂತ್ರ ಉಳಿಸಲು ಹೋರಾಡುತ್ತಿರುವ ರೈತರು ನಮಗೆಲ್ಲ ಸ್ಪೂರ್ತಿಯಾಗಲಿ. ಜಾಗೃತ ಪ್ರಜೆಗಳಿಂದ ಮಾತ್ರ ಪ್ರಜಾಪ್ರಭುತ್ವದ ಬಲವರ್ಧನೆ ಸಾಧ್ಯ ಎನ್ನುವ ಸತ್ಯ ನಮ್ಮೆಲ್ಲರಿಗೆ ತಿಳಿದಿರಲಿ. ಪ್ರಜಾಪ್ರಭುತ್ವ ಪ್ರೇಮಿಗಳಿಗೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ನಮಗೆಲ್ಲರಿಗೆ ಸ್ಫೂರ್ತಿಯಾಗಬೇಕು. ಇದು ಗಣತಂತ್ರ ಉಳಿಸುವ ಹೋರಾಟವಾಗಿದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.