ಗಂಡನ ಅಶ್ಲೀಲ ವಿಡಿಯೋ ದಂಧೆಯ ಬಗ್ಗೆ ಶಿಲ್ಪಾ ಶೆಟ್ಟಿಯ ಮೊದಲ ಪ್ರತಿಕ್ರಿಯೆ ಏನು ಗೊತ್ತಾ? - Mahanayaka
4:47 AM Thursday 14 - November 2024

ಗಂಡನ ಅಶ್ಲೀಲ ವಿಡಿಯೋ ದಂಧೆಯ ಬಗ್ಗೆ ಶಿಲ್ಪಾ ಶೆಟ್ಟಿಯ ಮೊದಲ ಪ್ರತಿಕ್ರಿಯೆ ಏನು ಗೊತ್ತಾ?

shilpa shetty
23/07/2021

ಸಿನಿಡೆಸ್ಕ್: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ದಂಧೆಯಲ್ಲಿ ಭಾಗಿಯಾದ ಆರೋಪದಲ್ಲಿ ಅರೆಸ್ಟ್ ಆದ ಬಳಿಕ ಮೌನವಹಿಸಿದ್ದ ಶಿಲ್ಪಾ ಶೆಟ್ಟಿ ಇದೀಗ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ ಕುಂದ್ರಾನನ್ನು ಮುಂಬೈ ಪೊಲೀಸರು ಅಶ್ಲೀಲ ವಿಡಿಯೋಗಳ ತಯಾರಿಕೆ ಹಾಗೂ ಆ್ಯಪ್ ಗಳ ಮೂಲಕ ಹಂಚಿಕೆ ಆರೋಪದ ಮೇಲೆ ಬಂಧಿಸಿದ್ದರು. ಇದಾದ ಬಳಿಕ ಶಿಲ್ಪಾ ಶೆಟ್ಟಿ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ತಾವು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದ ಟಿವಿ ಶೋಗಳಲ್ಲಿಯೂ ಶಿಲ್ಪಾ ಶೆಟ್ಟಿ ಗೈರಾಗಿರುವುದು ಕಂಡು ಬಂದಿತ್ತು.

ರಾಜ್ ಕುಂದ್ರಾ  ಅರೆಸ್ಟ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿಯೂ ಶಿಲ್ಪಾ ಶೆಟ್ಟಿ ಚಟುವಟಿಕೆಯಲ್ಲಿರಲಿಲ್ಲ. ಇದೀಗ ಘಟನೆಗೆ ಪ್ರತಿಕ್ರಿಯೆಯಾಗಿ ಅಮೆರಿಕದ ಬರಹಗಾರ ಜೇಮ್ಸ್ ಥರ್ಬರ್ ಅವರ ಮಾತುಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅದೃಷ್ಟ ಜೀವಂತವಾಗಿದೆ. ದೃಢ ನಿರ್ಧಾರದಿಂದಲೇ ಉಸಿರಾಡುತ್ತಿದ್ದೇವೆ. ಜೀವನದ ಎಲ್ಲಾ ಸವಾಲು ಹಾಗೂ ಬಿಕ್ಕಟ್ಟುಗಳನ್ನು ಇದುವರೆಗೆ ಜಯಿಸಿದ್ದೇನೆ. ಭವಿಷ್ಯದ ಸಮಸ್ಯೆಗಳಿಂದ ಬದುಕುಳಿಯುತ್ತೇನೆ. ನನ್ನ ಜೀವನವನ್ನು ಯಾರಿಂದಲೂ ದೂರವಾಗಿಸಲು ಸಾಧ್ಯವಿಲ್ಲ ಎಂದು ಪ್ರಸ್ತುತ ಸಮಸ್ಯೆಯ ಬಗ್ಗೆ ಶಿಲ್ಪಾ ಶೆಟ್ಟಿ ವಿವರಣೆ ನೀಡಲು ಈ ಪೋಸ್ಟ್ ನ್ನು ಮಾಡಿದ್ದಾರೆ ಎಂದು ಅಲ್ಲಿ ಕಂಡು ಬರುವ ಸಾಲುಗಳ ಬಗ್ಗೆ ಅಭಿಪ್ರಾಯ ಕೇಳಿ ಬಂದಿದೆ.




ಇನ್ನಷ್ಟು ಸುದ್ದಿಗಳು…

ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಕೊಂದರು!

ತನ್ನ ಇಬ್ಬರು ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳಿಂದಲೇ ಹತ್ಯೆಗೀಡಾದ ತಾಯಿ!

ಬಿಜೆಪಿಗೆ ರಾಜೀನಾಮೆ ಪರ್ವ ಆರಂಭವಾಗುತ್ತಾ? | 2ನೇ ಅಸ್ತ್ರ ಪ್ರಯೋಗಕ್ಕೆ ಸಜ್ಜು!

ವಿಡಿಯೋದಲ್ಲಿ ಬೆತ್ತಲಾಗಲು ರಾಜ್ ಕುಂದ್ರಾ  ಹೇಳಿದ್ದರು ಎಂದ ಯೂಟ್ಯೂಬ್ ಸ್ಟಾರ್ | ಶಿಲ್ಪಾ ಶೆಟ್ಟಿ ಪತಿಯ ಮತ್ತೊಂದು ಕರ್ಮಕಾಂಡ ಬಯಲು

ಇತ್ತೀಚಿನ ಸುದ್ದಿ