ಮನೆಯಲ್ಲಿ ಹೆಂಡ್ತಿ ಮಕ್ಕಳಿದ್ದಾರೆ, ಸೇಫಾಗಿ ಮನೆ ಮುಟ್ತೀವಾ?: ಗಂಧದ ಗುಡಿಯಲ್ಲಿ ಕಣ್ಣೀರು ತರಿಸಿದ ಅಪ್ಪು ಮಾತುಗಳು - Mahanayaka
8:07 AM Thursday 12 - December 2024

ಮನೆಯಲ್ಲಿ ಹೆಂಡ್ತಿ ಮಕ್ಕಳಿದ್ದಾರೆ, ಸೇಫಾಗಿ ಮನೆ ಮುಟ್ತೀವಾ?: ಗಂಧದ ಗುಡಿಯಲ್ಲಿ ಕಣ್ಣೀರು ತರಿಸಿದ ಅಪ್ಪು ಮಾತುಗಳು

gandhada gudi
29/10/2022

ಗಂಧದಗುಡಿ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಅಭಿಮಾನಿಗಳನ್ನು ಅಕಾಲಿಕವಾಗಿ ಅಗಲಿದ  ಅಪ್ಪುವನ್ನು ಜೀವಂತವಾಗಿರಿಸಲು ಗಂಧದ ಗುಡಿ ಯಶಸ್ವಿಯಾಗಿದೆ. ಕಾಡಿನ ದೃಶ್ಯವೊಂದರಲ್ಲಿ ಅಪ್ಪು ಆಡಿದ ಮಾತು ಅವರ ಅಭಿಮಾನಿಗಳನ್ನು ಕಣ್ಣೀರು ಹಾಕುವಂತೆ ಮಾಡಿದೆ.

ಪುನೀತ್ ರಾಜ್ ಕುಮಾರ್ ಹಾಗೂ ಅಮೋಘವರ್ಷ ಪಶ್ಚಿಮ ಘಟ್ಟದ ಕಾಡಿಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಸಪ್ಪಳವೊಂದನ್ನು ಕೇಳಿ ಪುನೀತ್ ಕುತೂಹಲದಿಂದ ಇದೇನು ಶಬ್ದ ಎಂದು ಅಮೋಘ ಅವರ ಬಳಿ ಕೇಳುತ್ತಾರೆ.

ಅಪ್ಪು ಪ್ರಶ್ನೆಗೆ ಉತ್ತರಿಸಿದ ಅಮೋಘವರ್ಷ, ಇಲ್ಲಿ ವಿಪರೀತ ಹಾವುಗಳಿವೆ ಎನ್ನುತ್ತಾರೆ. ಈ ವೇಳೆ ಪುನೀತ್ ಇನ್ನೂ 3 ಚಿತ್ರಗಳಿವೆ, ಮನೆಯಲ್ಲಿ ಹೆಂಡತಿ ಮಕ್ಕಳಿದ್ದಾರೆ ನಾವು ಸೇಫ್ ಆಗಿ ಮನೆ ಸೇರುತ್ತೀವಾ? ಎಂಬ ಪ್ರಶ್ನೆ ಹಾಕುತ್ತಾರೆ.  ಪ್ರಶ್ನೆ ಅಭಿಮಾನಿಗಳನ್ನು ಭಾವುಕರನ್ನಾಗಿಸುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ