ಸ್ವಾತಂತ್ರ್ಯ ದಿನಾಚರಣೆ: ಗಾಂಧಿ, ಭಗತ್ ಸಿಂಗ್, ಅಂಬೇಡ್ಕರರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದು, ಇದೇ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನಿಯರನ್ನು ನೆನಪಿಸಿಕೊಂಡರು.
ಮಹಾತ್ಮ ಗಾಂಧಿ, ಭಗತ್ ಸಿಂಗ್, ಬಾಬಾ ಸಾಹೇಬ್ ಅಂಬೇಡ್ಕರ್ ಸೇರಿದಂತೆ ದೇಶವನ್ನು ರೂಪಿಸಿದ ಎಲ್ಲರನ್ನೂ ನೆನೆದ ಪ್ರಧಾನಿ ಮೋದಿ, ದೇಶ ಸದ್ಯ ಎದುರಿಸುತ್ತಿರುವ ಕೊವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನೂ ನೆನಪಿಸಿಕೊಂಡರು.
ಸೋಲು ಗೆಲುವು ಬಂದರೂ ಕೂಡಾ ಭಾರತವು ಸ್ವಾತಂತ್ಯ್ರದ ನಿಟ್ಟಿನಲ್ಲಿ ಹೋರಾಡಿದೆ. ‘ಕೋವಿಡ್ ಲಸಿಕೆ ಮಾಡಿದ ವಿಜ್ಞಾನಿಗಳು, ಸೇವೆ ಮಾಡುತ್ತಿರುವ ಕೋಟ್ಯಾಂತರ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಬೇಕು. ಕೊರೊನಾ ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸರ್ಕಾರ ಈ ಜನರೊಂದಿಗೆ ಇದೆ ಎಂದು ಅವರು ಹೇಳಿದರು.
ದೇಶವು ಕೊರೊನಾ ಲಸಿಕೆಗಾಗಿ ಬೇರೆ ಯಾರ ಮೇಲೆಯೂ ಅವಲಂಬಿತರಾಗಬೇಕಾದ ಸ್ಥಿತಿ ನಮಗೆ ಬಾರದಂತೆ ವಿಜ್ಞಾನಿಗಳು ನೋಡಿದ್ದಾರೆ.ನಮ್ಮ ದೇಶದಲ್ಲಿ ಕೊವಿಡ್ ಲಸಿಕೆ ಇಲ್ಲದಿರುತ್ತಿದ್ದರೆ, ಮುಂದಾಗುತ್ತಿರುವ ಪರಿಣಾಮದ ಗಂಭೀರತೆಯನ್ನು ಆಲೋಚಿಸಿ ಎಂದ ಪ್ರಧಾನಿ, ವಿಜ್ಞಾನಿಗಳ ಕೊಡುಗೆಯನ್ನು ನೆನೆದರು.
ಇನ್ನಷ್ಟು ಸುದ್ದಿಗಳು…
ಅಮೃತಘಳಿಗೆಯ ವಿಜೃಂಭಣೆಯೂ, ಪ್ರಜಾತಂತ್ರ ಭಾರತದ ಆತಂಕಗಳೂ | ನಾ ದಿವಾಕರ
ಎಲ್ಲಾ ಜಾತಿಯವರೂ ಅರ್ಚಕ ಹುದ್ದೆ ಪಡೆಯಲು ಅರ್ಹರು: ಕ್ರಾಂತಿಕಾರಿ ಹೆಜ್ಜೆಯಿಟ್ಟ ಎಂ.ಕೆ.ಸ್ಟ್ಯಾಲಿನ್
“ಬಿಜೆಪಿಯು ದಲಿತರ ಪರವಾಗಿದೆ ಅನ್ನಿಸುತ್ತಿದೆ” | “ಸದಾಶಿವ ಆಯೋಗ ವರದಿ ಜಾರಿ ಮಾಡಿ”
ಹಿಂದಿನ ನಿಯಮಗಳೇ ಮುಂದುವರಿಕೆ: ಪಾಸಿವಿಟಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ನಿರ್ಧಾರ | ಸಿಎಂ ಬೊಮ್ಮಾಯಿ
ಕಾರ್ಯಕ್ರಮದ ವೇದಿಕೆಯಲ್ಲಿಯೇ ಬೈದಾಡಿಕೊಂಡು ಹೊಡೆದಾಟಕ್ಕೆ ನಿಂತ ಶಾಸಕ-ಸಂಸದ!