ಗಂಡಿಬಾಗಿಲು:  ಪ್ರತಿನಿತ್ಯ ಜಗಳವಾಡುತ್ತಿದ್ದ ಈ ಬಾರಿ ಪತ್ನಿಯನ್ನು ಕೊಂದೇ ಬಿಟ್ಟ - Mahanayaka

ಗಂಡಿಬಾಗಿಲು:  ಪ್ರತಿನಿತ್ಯ ಜಗಳವಾಡುತ್ತಿದ್ದ ಈ ಬಾರಿ ಪತ್ನಿಯನ್ನು ಕೊಂದೇ ಬಿಟ್ಟ

08/01/2021

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಮೀಪ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು  ಕಟ್ಟಿಗೆಯ ತುಂಡಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ  40 ವರ್ಷದ ಸೌಮ್ಯ ಫ್ರಾನ್ಸಿಸ್  ಹತ್ಯೆಗೀಡಾದ ಮಹಿಳೆಯಾಗಿದ್ದು, ಈಕೆಯ ಪತಿ 47 ವರ್ಷದ  ಜಾನ್ ಸನ್ ಹತ್ಯೆ ಆರೋಪಿಯಾಗಿದ್ದಾನೆ. ಪತ್ನಿಯ ಜೊತೆಗೆ ಪ್ರತಿನಿತ್ಯ ಜಗಳ ಮಾಡುತ್ತಿದ್ದ ಜಾನ್ಸನ್ ಎಂದಿನಂತೆಯೇ ನಿನ್ನೆಯೂ ಜಗಳವಾಡಿದ್ದಾನೆ.  ಆದರೆ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ರಾತ್ರಿ 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಜಾನ್ಸನ್ ಕೋಪದಲ್ಲಿ ತನ್ನ ಪತ್ನಿಗೆ ಕಟ್ಟಿಗೆಯ ತುಂಡಿನಲ್ಲಿ ಹೊಡೆದಿದ್ದು, ಪರಿಣಾಮವಾಗಿ ಸೌಮ್ಯ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.  ತಕ್ಷಣವೇ ಜಾನ್ಸನ್ ಸ್ಥಳೀಯರ ಸಹಾಯದೊಂದಿಗೆ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಸೌಮ್ಯ ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಸೌಮ್ಯ  ಅವರ ಸಹೋದರ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಆರೋಪಿ ಜಾನ್ ಸನ್ ನನ್ನು ಬಂಧಿಸಲಾಗಿದೆ. ಕೇರಳದ  ಕೇರಳದ ಇರುಟ್ಟಿ ನಿವಾಸಿಗಳಾದ್ದ ದಂಪತಿ ಗಂಡಿಬಾಗಿಲು ಸಮೀಪ ಜಮೀನು ಹೊಂದಿದ್ದರು. ಇಬ್ಬರು ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದರು. ಇವರಿಗೆ 10 ವರ್ಷದ ಮಗು ಕೂಡ ಇದೆ ಇದೀಗ ತಾಯಿ ಹತ್ಯೆಗೀಡಾಗಿದ್ದು, ತಂದೆ ಜೈಲು ಪಾಲಾಗಿದ್ದು, ಮಗು ಅನಾಥವಾಗಿದೆ.  ಕೃತ್ಯದ ವೇಳೆ ಜಾನ್ಸನ್ ಮದ್ಯಪಾನ ಮಾಡಿದ್ದ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ