ಗಾಂಧಿಧಾಮ್-ಪುರಿ ಎಕ್ಸ್ ​ಪ್ರೆಸ್ ರೈಲ್‌ ನಲ್ಲಿ ಬೆಂಕಿ

train
29/01/2022

ಮಹಾರಾಷ್ಟ್ರ: ರೈಲ್‌ ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ನಂದೂರ್​ಬಾರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಗಾಂಧಿಧಾಮ್ ಎಕ್ಸ್​ ಪ್ರೆಸ್​ ರೈಲ್‌ ನ ಬೋಗಿಯಲ್ಲಿ ಬೆಳಗ್ಗೆ 10.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೋಗಿ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಯಾವುದೇ ಪ್ರಾಣಾಪಾಯದ ಬಗ್ಗೆ ಇನ್ನೂ ವರದಿಯಾಗಿಲ್ಲ.

ರೈಲು ಗಾಂಧಿಧಾಮದಿಂದ ಪುರಿಯ ಕಡೆಗೆ ಹೊರಟಿತ್ತು. ನಂದೂ ರ್ಬಾರ್ ರೈಲು ನಿಲ್ದಾಣದಿಂದ ರೈಲು ಸ್ವಲ್ಪ ದೂರದಲ್ಲಿದ್ದಾಗ, ರೈಲಿನ ಪ್ಯಾಂಟ್ರಿ ಬಾಕ್ಸ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದ ತಕ್ಷಣ ರೈಲ್‌ ನ್ನು ನಿಲ್ಲಿಸಲಾಗಿದೆ. ಬಳಿಕ ಪ್ರಯಾಣಿಕರು ರೈಲ್‌ ನಿಂದ ಹೊರಬಂದಿದ್ದು, ನಂದೂರ್ ​ಬಾರ್ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಎರಡು ಕೋಚ್ ​ಗಳಲ್ಲಿ ಬೆಂಕಿ ಆವರಿಸಿದ್ದು, ಅವುಗಳನ್ನು ಇತರ ಕೋಚ್ ​ಗಳಿಂದ ಬೇರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮದ್ಯದ ಪಾರ್ಟಿ: ‘ಗಟ್ಟಿಮೇಳ’ ಧಾರಾವಾಹಿಯ ನಟ ರಕ್ಷಿತ್‌ ವಿರುದ್ಧ ಪ್ರಕರಣ

ಬೋಟ್ ದುರಂತ: ಇಬ್ಬರು ಅಪ್ರಾಪ್ತರು ನಾಪತ್ತೆ, 10 ಮಂದಿ ರಕ್ಷಣೆ

ಪತ್ನಿಯ ಅನುಮಾನಾಸ್ಪದ ಸಾವು: ಇಡೀ ರಾತ್ರಿ ಮೃತದೇಹದೊಂದಿಗೆ ಕಾಲ ಕಳೆದ ಪತಿ

ಸಮುದ್ರಕ್ಕೆ ಹಾರಿ ಯುವತಿ ಆತ್ಮಹತ್ಯೆಗೆ ಯತ್ನ: ರಕ್ಷಿಸಲು ಹೋದ ಸ್ನೇಹಿತನೇ ಸಮುದ್ರಪಾಲು

ಹಿಂದೂಗಳಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ: ಆಕ್ಷೇಪಾರ್ಹ ಬ್ಯಾನರ್ ಅಳವಡಿಕೆ

 

ಇತ್ತೀಚಿನ ಸುದ್ದಿ

Exit mobile version