ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ನಡು ರಸ್ತೆಯಲ್ಲೇ ತಾಯಿಗೆ ಮಾರಣಾಂತಿಕ ಹಲ್ಲೆ!
ಉತ್ತರ ಪ್ರದೇಶ: ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ತಾಯಿಗೆ ಪತಿ ಮತ್ತು ಮಹಿಳೆಯರು ಸೇರಿದಂತೆ ಸಂಬಂಧಿಕರು ಅಮಾನುಷವಾಗಿ ಥಳಿಸಿದ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮಹಿಳೆ ಜನ್ಮ ನೀಡಿದ ಎರಡೂ ಮಕ್ಕಳೂ ಹೆಣ್ಣು ಮಕ್ಕಳಾಗಿದ್ದಾರೆ ಎನ್ನುವ ಕಾರಣಕ್ಕೆ ಮಹಿಳೆಗೆ ಹಲ್ಲೆ ನಡೆಸಲಾಗಿದ್ದು, ಸಂತ್ರಸ್ತೆಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲ ಮಗುವಿಗೆ ಜನ್ಮ ನೀಡಿದ ಅಂದಿನಿಂದಲೇ ಆಕೆಯ ಸಂಬಂಧಿಕರು ಕಿರುಕುಳ ನೀಡಲು ಆರಂಭಿಸಿದ್ದರು. ಎರಡನೇ ಹೆಣ್ಣು ಮಗುವಿನ ಜನನದೊಂದಿಗೆ ಕ್ರೌರ್ಯವು ಹೆಚ್ಚಾಯಿತು. ರಸ್ತೆಯಲ್ಲೇ ತಾಯಿಗೆ ಹಲ್ಲೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಹಿಳೆಯರು ಅಶ್ಲೀಲ ಶಬ್ಧಗಳನ್ನು ಬಳಸಿ ತಾಯಿಗೆ ಬಲವಾಗಿ ಹೊಡೆಯುತ್ತಿದ್ದು, ತಾಯಿ ಹೊಡೆಯ ಬೇಡಿ ಎಂದು ಅಂಗಾಲಾಚುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇನ್ನೂ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಲಾಗುತ್ತಿದ್ದರೂ, ಸುತ್ತಮುತ್ತಲಿನ ಜನರು ನೋಡುತ್ತಾ ಮನರಂಜನೆ ಪಡೆದುಕೊಂಡರೇ ಹೊರತು, ಯಾರು ಕೂಡ ಹಲ್ಲೆಯನ್ನು ತಡೆಯಲು ಮುಂದಾಗಿಲ್ಲ.
ಮನುಸ್ಮೃತಿಯ ಪ್ರಕಾರ ಹೆತ್ತವರು ಸ್ವರ್ಗಕ್ಕೆ ಹೋಗಬೇಕಾದರೆ, ಗಂಡು ಸಂತಾನ ಬೇಕು ಎನ್ನುವ ನಂಬಿಕೆ ಇದೆ. ಈ ಮೂಢನಂಬಿಕೆಯನ್ನು ಜನರು ಈಗಲೂ ನಂಬುತ್ತಿದ್ದಾರೆ. ಜೊತೆಗೆ ವಿಜ್ಞಾನದ ಅರಿವಿಲ್ಲದ ಜನ, ಗಂಡು ಮಗುವಾಗದಿರುವುದಕ್ಕೆ ತಾಯಿಯೇ ಕಾರಣ ಎಂದು ಆರೋಪಿಸಿ ಈ ಹಿಂದಿನಿಂದಲೂ ಹೆಣ್ಣಿನ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇದು ಇನ್ನೂ ನಿಂತಿಲ್ಲ. ಹೆಣ್ಣು ಮಕ್ಕಳೇ ಮುಂದೆ ನಿಂತು ತಂದೆ ತಾಯಿಯ ಅಂತ್ಯಸಂಸ್ಕಾರ ನಡೆಸುವಂತಹ ಸನ್ನಿವೇಶಗಳು ನಮ್ಮ ನಡುವೆ ಆಗೊಂದು ಈಗೊಂದು ಕಂಡು ಬಂದರೂ, ಇನ್ನೂ ಕೂಡ ಗಂಡು ಮಗುವಿನ ವ್ಯಾಮೋಹ ಜನರನ್ನು ಬಿಟ್ಟಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಿಎಸ್ ಐ ಅಭ್ಯರ್ಥಿ ಮೇಲೆ ಹೆಚ್ ಡಿಕೆ ಗನ್ ಮ್ಯಾನ್ ಹಲ್ಲೆ ಆರೋಪ!
ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಬಸ್ ಚಾಲಕ
ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಶುರು ಮಾಡ್ತೇವೆ: ಸಿದ್ದರಾಮಯ್ಯ