ಗಣೇಶ ಮೂರ್ತಿಯ ವಿಸರ್ಜನೆಯಲ್ಲಿ ಭಾಗವಹಿಸಿ ಬಂದು ಮಲಗಿದ್ದ ಯುವಕ ಸಾವು - Mahanayaka
8:13 PM Thursday 12 - December 2024

ಗಣೇಶ ಮೂರ್ತಿಯ ವಿಸರ್ಜನೆಯಲ್ಲಿ ಭಾಗವಹಿಸಿ ಬಂದು ಮಲಗಿದ್ದ ಯುವಕ ಸಾವು

youth death
03/09/2022

ಗಣೇಶ ಮೂರ್ತಿಯ ವಿಸರ್ಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಬಂದು ಮಲಗಿದ್ದ ಯುವಕನೋರ್ವ ಹಠಾತ್ ಆಗಿ ಮೃತಪಟ್ಟ ಘಟನೆ ಮಣಿಪಾಲದ ಹೆರ್ಗಾ ಗ್ರಾಮದ ನೆಹರು ನಗರದಲ್ಲಿ ನಡೆದಿದೆ.

ಮಣಿಪಾಲದ ಟೋಟಲ್ ಗ್ಯಾಸ್ ಎಜೆನ್ಸಿಯವರ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ 28 ವರ್ಷದ ಮಂಜುನಾಥ ಮೃತದುರ್ದೈವಿ. ಇವರು ಸೆ.2 ರಂದು  ಗಣೇಶ ಮೂರ್ತಿಯ ವಿಸರ್ಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ 11 ಗಂಟೆಗೆ ಸುಮಾರಿಗೆ ತಮ್ಮ ದೊಡ್ಡಪ್ಪನ ಮನೆಯ ಟೆರೇಸ್ ಮೇಲೆ ಮಲಗಿದ್ದರು.

ಇಂದು ಬೆಳಗ್ಗೆ ನಸುಕಿನ ವೇಳೆ ಮಂಜುನಾಥ ಅವರು ಜೊತೆಗೆ ಮಲಗಿದ್ದ ಲಾಜರ್ ಅವರನ್ನು ಎಬ್ಬಿಸಿ ನೀರು ಕೇಳಿದ್ದು, ನೀರು ಕುಡಿದು ನಂತರ ಮನೆಯ ಹತ್ತಿರ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಆತನ ಸ್ನೇಹಿತ ಯಲ್ಲಪ್ಪ ನ ಕಾರಿನಲ್ಲಿ ಮಲಗಿದ್ದರು. ಬೆಳಿಗ್ಗೆ 7.30 ರ ಸುಮಾರಿಗೆ ಲಾಜರ್ ಮತ್ತು ಸ್ನೇಹಿತರು ಎಬ್ಬಿಸಲು ಹೋದಾಗ ಮಂಜುನಾಥ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಜುನಾಥ್ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮೃತರ ತಂದೆ  ಬಸವರಾಜ ಉಳ್ಳಾಗಡ್ಡಿ ಎಂಬವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ