ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ - Mahanayaka
3:28 AM Wednesday 11 - December 2024

ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ

ganeshosthv
10/09/2021

ಬೆಂಗಳೂರು: ಕೊವಿಡ್ ಸಾಂಕ್ರಾಮಿಕ ರೋಗದ ನಡುವೆಯೇ ಇಂದು ರಾಜ್ಯದಲ್ಲಿ ಸರ್ಕಾರದ ಮಾರ್ಗಸೂಚಿಗಳಿಗೊಳಪಟ್ಟು ಗಣೇಶೋತ್ಸವ ಆಚರಿಸಲಾಗುತ್ತಿದೆ. ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು, ಗಣೇಶೋತ್ಸವ ಸಮಿತಿಗಳ ನೇತೃತದಲ್ಲಿ ಇಂದು ರಾಜ್ಯದ ವಿವಿಧೆಡೆಗಳಲ್ಲಿ ಗಣೇಶನ ಮೂರ್ತಿ ಸ್ಥಾಪಿಸಲಾಗಿದೆ. ಇನ್ನೂ ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಗಣೇಶೋತ್ಸವಕ್ಕೆ ಶುಭಕೋರಿ, ನಾಡಿನ ಜನತೆಗೆ ಗಣೇಶ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ವಿನಾಯಕನ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ಗಣಪತಿಯು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕೂಡ ಗಣೇಶೋತ್ಸವಕ್ಕೆ ಶುಭಕೋರಿದ್ದು, ಸಂಕಷ್ಟಹರ ಗಣಪತಿಯು ತಮ್ಮೆಲ್ಲರ ಕಷ್ಟ ನಷ್ಟಗಳನ್ನು ದೂರಮಾಡಿ, ಸುಖ ಸಮೃದ್ಧಿಯನ್ನು ಕರುಣಿಸಲಿ. ಹಬ್ಬದ ಆಚರಣೆಯನ್ನು ಆಡಂಬರಕ್ಕಿಂತ ಭಕ್ತಿ ಪ್ರಧಾನವಾಗಿಸೋಣ. ಕೊರೊನಾ ಸೋಂಕು ನಿಯಂತ್ರಣದ ಜವಾಬ್ದಾರಿಯನ್ನು ಮರೆಯದಿರೋಣ. ನಾಡಿನ ಸಮಸ್ತ ಜನರಿಗೆ ಗಣೇಶ ಚತುರ್ಥಿಯ ಶುಭಕಾಮನೆಗಳು ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶುಭಕೋರಿ, ಗಣೇಶನೆಂದರೆ ವಿಘ್ನ ನಿವಾರಕ, ಸಂಕಟ ಹರಣ. ಕೋವಿಡ್‌ 19 ನಂತಹ ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ವಿನಾಯಕನ ಪ್ರಾರ್ಥನೆ ಅನಿವಾರ್ಯ ಹಾಗೂ ಅರ್ಥಪೂರ್ಣವೂ ಹೌದು. ಈ ಗಣೇಶ ಚತುರ್ಥಿಯು ನಿಮ್ಮ ಬದುಕಿನಲ್ಲಿ ಯಶಸ್ಸು ಮತ್ತು ಶುಭವನ್ನು ತರಲಿ. ಪ್ರೀತಿಪಾತ್ರರೊಂದಿಗೆ ಹಬ್ಬ ಆಚರಿಸುವಾಗ ಕೋವಿಡ್‌ ಮಾರ್ಗಸೂಚಿಗಳು ಗಮನದಲ್ಲಿರಲಿ. ಶುಭವಾಗಲಿ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, “ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||” ನಾಡಿನ ಸಮಸ್ತ ಜನತೆಗೆ ವಿನಾಯಕ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು ಎಂದು ಶುಭಕೋರಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಣೇಶೋತ್ಸವದ ಶುಭಕೋರಿದ್ದು, ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು. ಆ ತಾಯಿ ಗೌರಿ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ. ಶ್ರೀ ವಿಘ್ನೇಶ್ವರನು ಎಲ್ಲರ ವಿಘ್ನಗಳನ್ನು ನಿವಾರಿಸಿ ಕರುಣೆ ತೋರಲಿ.  ಹಬ್ಬವನ್ನು ನಮ್ಮ ಮನೆ-ಮನಗಳಲ್ಲಿ ಸಂಭ್ರಮದಿಂದ, ಶ್ರದ್ಧೆ-ಭಕ್ತಿಯಿಂದ ಆಚರಿಸೋಣ. ಕೊರೊನಾ ಅಪಾಯ ಮರೆಯದಿರೋಣ. ಆದಷ್ಟು ಬೇಗ ಮಹಾಮಾರಿ ವೈರಸ್‌ ತೊಲಗಲಿ ಎಂದು ಪ್ರಾರ್ಥಿಸೋಣ. ಎಲ್ಲೂ ಮೈಮರೆಯುವುದು ಬೇಡ, ಇನ್ನೊಬ್ಬರಿಗೆ ತೊಂದರೆ ಆಗುವುದೂ ಬೇಡ. ರಾಜ್ಯ ಸರಕಾರ ಜಾರಿ ಮಾಡಿರುವ ಕೋವಿಡ್-‌19 ನಿಯಮಗಳನ್ನು ಪಾಲಿಸುತ್ತಲೇ ವಿನಾಯಕನನ್ನು ಪೂಜಿಸೋಣ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ಗೌರಿಪುತ್ರನಲ್ಲಿ ಪ್ರಾರ್ಥನೆ ಮಾಡುವೆ ಎಂದಿದ್ದಾರೆ.

ಇನ್ನಷ್ಟು ಸುದ್ದಿಗಳು…

ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ

ಸಹೋದರಿಗೆ ಬಾಗಿನ ನೀಡಿ ಪುತ್ರಿಯೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ಸಹೋದರ, ಪುತ್ರಿ ಇಬ್ಬರೂ ಅಪಘಾತಕ್ಕೆ ಬಲಿ

ಪೊಲೀಸ್ ಅಧಿಕಾರಿಯ ಜೇಬಿಗೆ ಕೈ ಹಾಕಿ ಚಿನ್ನದ ಬಳೆ ಕದ್ದ ಕಳ್ಳ!

ಯಡಿಯೂರಪ್ಪನವರನ್ನು ಕೆಳಗಿಳಿಸಿದ ಫಲವನ್ನು ಇವರೆಲ್ಲ ಉಣ್ಣುತ್ತಾರೆ ನೋಡಿ | ಕೋಡಿ ಶ್ರೀಗಳಿಂದ ಸಸ್ಪೆನ್ಸ್, ಥ್ರಿಲ್ಲರ್ ಭವಿಷ್ಯ!

ದಂಪತಿಯನ್ನು ಅಡ್ಡಗಟ್ಟಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಿನ್ನಾಭರಣ ದೋಚಿದ ದರೋಡೆಕೋರರು

ಚೌತಿಗೂ ಮೊದಲೇ ಬಿಬಿಎಂಪಿ ಕಚೇರಿ ಆವರಣಕ್ಕೆ ಬಂದ ಗಣಪ! |  ಗಣೇಶೋತ್ಸವಕ್ಕೆ ನಿರ್ಬಂಧದ ವಿರುದ್ಧ ಪ್ರತಿಭಟನೆ

ಬಸ್ ನಿಂದ ಇಳಿದು ರಸ್ತೆ ದಾಟುವಷ್ಟರಲ್ಲೇ ತಾಯಿ, ಮಗಳಿಗೆ ಡಿಕ್ಕಿ ಹೊಡೆದಿತ್ತು ಕಾರು! | ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿತ್ತು ಪ್ರಾಣ!

ಇತ್ತೀಚಿನ ಸುದ್ದಿ