7 ವರ್ಷದ ಬಾಲಕಿಯ ಅತ್ಯಾಚಾರದ ಆರೋಪಿಗಳ ಎನ್ ಕೌಂಟರ್ - Mahanayaka
10:30 PM Tuesday 24 - December 2024

7 ವರ್ಷದ ಬಾಲಕಿಯ ಅತ್ಯಾಚಾರದ ಆರೋಪಿಗಳ ಎನ್ ಕೌಂಟರ್

encounter
17/03/2022

ಗುವಾಹಟಿ: ಅಸ್ಸಾಂ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.  ಏಳು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದಲ್ಲಿ  ಅಸ್ಸಾಂ ಪೊಲೀಸರು ಬುಧವಾರ ಆರೋಪಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಆರೋಪಿ ರಾಜೇಶ್ ಮುಂಡಾ (38) ಮಜ್ಬತ್ ನಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಹತ್ಯೆಗೀಡಾಗಿದ್ದಾನೆ.  ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ರಕ್ಷಿಸಲಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಈತ ಬುಧವಾರ ಬೆಳಗ್ಗೆ ಉದಲ್ಗುರಿ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ.

”ಮಾರ್ಚ್ 10ರಂದು ಏಳು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದೆವು.ನಮ್ಮ ತನಿಖೆಯ ಆಧಾರದ ಮೇಲೆ, ಆರೋಪಿ ರಾಜೇಶ್ ಮುಂಡಾನನ್ನು ಮಂಗಳವಾರ ಬೈಹಾತ ಚರಿಯಾಲಿಯ ಕಾರ್ಖಾನೆಯಿಂದ ಬಂಧಿಸಲಾಯಿತು, ”ಎಂದು ಉದಲ್ಗುರಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿದ್ಯುತ್ ದಾಸ್ ಬೊರೊ ಹೇಳಿದರು.

ಬುಧವಾರ ಬೆಳಗಿನ ಜಾವ 2:30ರ ಸುಮಾರಿಗೆ ಆರೋಪಿಯನ್ನು ಅಪರಾಧ ಸ್ಥಳಕ್ಕೆ ಕರೆದೊಯ್ಯುವಾಗ ಬಂಧನದಿಂದ ಪರಾರಿಯಾಗಲು ಯತ್ನಿಸಿದನು.  ಈ ಸಮಯದಲ್ಲಿ  ಪೊಲೀಸ್ ತಂಡ ಗುಂಡು ಹಾರಿಸಿದ್ದು, ಆರೋಪಿ ಗಾಯಗೊಂಡಿದ್ದಾನೆ. ತಕ್ಷಣ  ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೆ, ಆರೋಪಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ನಡೆದ ಎರಡನೇ ಅತ್ಯಾಚಾರ ಪ್ರಕರಣ ಇದಾಗಿದೆ.  ಮಂಗಳವಾರ ರಾತ್ರಿ ಗುವಾಹಟಿಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ಬಿಕ್ಕಿ ಅಲಿಯನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಲಾಡ್ಜ್ ನಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ

ಮೂವರು ಪತ್ನಿಯರ ಗಂಡ ಭೀಕರ ಹತ್ಯೆ: ವಾಕಿಂಗ್ ಗೆ ಹೋಗಿದ್ದೇ ತಪ್ಪಾಯ್ತೆ?

ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿದ್ದು ರಾಜೀನಾಮೆ

ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಥಿಯೇಟರ್​​ ನಲ್ಲಿ ನಾಳೆ ಜೇಮ್ಸ್​ ರಿಲೀಸ್​​

ಉಕ್ರೇನ್‌ ನ ಮಾರಿಯುಪೋಲ್ ಆಸ್ಪತ್ರೆಯನ್ನು ವಶಕ್ಕೆ ಪಡೆದ ರಷ್ಯಾ ಸೇನೆ

ಇತ್ತೀಚಿನ ಸುದ್ದಿ