ಗಂಗಾ ನದಿ ದಂಡೆಯಲ್ಲಿ ದಫನ ಮಾಡಿದ ಸ್ಥಿತಿಯಲ್ಲಿ 150ಕ್ಕೂ ಅಧಿಕ ಮೃತದೇಗಳು ಪತ್ತೆ

ಕಾನ್ಪುರ: ಗಂಗಾ ನದಿಯ ದಂಡೆಯಲ್ಲಿ ಸುಮಾರು 150ಕ್ಕೂ ಅಧಿಕ ಮೃತದೇಹಗಳನ್ನು ದಫನ ಮಾಡಲಾಗಿದ್ದು, ಈ ಪ್ರದೇಶಕ್ಕೆ ವಾಹನಗಳು ಬರಲು ರಸ್ತೆಗಳಿಲ್ಲ. ಆದರೂ ಹೇಗೆ ಇಲ್ಲಿ ಗೆ ತರಲಾಗಿದೆ ಎನ್ನುವ ಅನುಮಾನಗಳು ಮೂಡಿವೆ.
ಕಾನ್ಪುರದ ಬಳಿಯ ಗಂಗಾ ನದಿಯಲ್ಲಿ ಮರಳುಗಳಲ್ಲಿ ಸಾಲು ಸಾಲು ಮೃತದೇಹಗಳನ್ನು ದಫನ ಮಾಡಿರುವುದು ಕಂಡು ಬಂದಿದೆ. ಮೃತರ ಹೊದಿಕೆಗಳು, ಲೋಟ, ಮದ್ದಿನ ಬಾಟಲಿಗಳನ್ನು ಕೂಡ ಅದೇ ಸ್ಥಳಗಳಲ್ಲಿ ಎಸೆಯಲಾಗಿರುವುದು ಕಂಡು ಬಂದಿದೆ.
ನದಿಯ ಬಳಿಯಲ್ಲಿ ಉದ್ದವಾದ ಸೇತುವೆ ಇದೆ. ಆದರೆ ನದಿಗೆ ಇಳಿಯಲು ಯಾವುದೇ ರಸ್ತೆಗಳು ಕೂಡ ಅಲ್ಲಿ ಇಲ್ಲ. ಮೃತದೇಹವನ್ನು ಮೇಲಿನಿಂದ ಎತ್ತಿ ಕೆಳಗಡೆ ಎಸೆದು ಬಳಿಕ ಹೂತಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪತ್ರಕರ್ತರ ತಂಡವೊಂದು ಭೇಟಿ ನೀಡಿದ್ದರಿಂದಾಗಿ ಈ ಘಟನೆ ಬೆಳಕಿಗೆ ಬಂದಿದೆ. ಮರಳಿನಲ್ಲಿ ನೂರಾರು ಮೃತದೇಹಗಳನ್ನು ಹುದುಗಿಸಿಡಲಾಗಿದೆ. ಮಳೆಯಿಂದ ನದಿ ತುಂಬಿದರೆ, ಈ ಮೃತದೇಹಗಳೆಲ್ಲವೂ ಗಂಗಾ ನದಿಗೆ ಮತ್ತೆ ಸೇರಲಿದೆ.
ಮೋದಿ ಸರ್ಕಾರ ಒಂದೆಡೆ ಗಂಗಾ ನದಿ ಶುದ್ಧೀಕರಣ ಯೋಜನೆಯ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ವಿನಿಯೋಗಿಸುತ್ತಿದೆ. ಆದರೆ ಇದರ ನಡುವೆಯೇ ಕೊವಿಡ್ ಅಥವಾ ಬೇರಾವುದೋ, ಕಾರಣಗಳಿಂದ ಮೃತಪಟ್ಟ ಮೃತದೇಹಗಳನ್ನು ಇದೇ ಪ್ರದೇಶದಲ್ಲಿ ಹೂತು ಹಾಕಲಾಗಿದೆ.
This is Kanpur and its sandy ravines where no road is available to reach by car and you must go down by motorcycle which we do, to find hundreds of bodies in the sand and locals that testify to how these bodies are left in the cover of night. We marked five place along the Ganga pic.twitter.com/y88Lgbq6zr
— barkha dutt (@BDUTT) May 20, 2021