ನಿಷೇಧಿತ ಮಾದಕ ವಸ್ತು, ಗಾಂಜಾ ಮಾರಾಟ: ಮಂಗಳೂರಿನಲ್ಲಿ ಮತ್ತೆ ಮೂವರ ಬಂಧನ
ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮಂಗಳೂರಲ್ಲಿ ಮೂವರನ್ನು ಬಂಧಿಸಲಾಗಿದೆ.
ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಪ್ಯಾಥೊಲಜಿ ಎಂಡಿ ಮಾಡುತ್ತಿರುವ ತುಮಕೂರು ಮೂಲದ ಹರ್ಷ ಕುಮಾರ್, ಡಿಫಾರ್ಮ ವಿದ್ಯಾರ್ಥಿ ಕೇರಳದ ಕೊಚ್ಚಿನ್ ಮೂಲದ ಅಡಾನ್ ದೇವ್ ಮತ್ತು ಮಂಗಳೂರು ಕಸಬ ಬೆಂಗ್ರೆ ನಿವಾಸಿ, ಹಣ್ಣುಹಂಪಲು ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುವ ಮುಹಮ್ಮದ್ ಅಫ್ರಾರ್(23) ಬಂಧಿತ ಆರೋಪಿಗಳು.
ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಜಾಲವೊಂದನ್ನು ಭೇದಿಸಿರುವ ಮಂಗಳೂರು ಪೊಲೀಸರು ನಗರದ ಪ್ರತಿಷ್ಠಿತ 2 ವೈದ್ಯಕೀಯ ಕಾಲೇಜಿನ ಇಬ್ಬರು ವೈದ್ಯರು, 7 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ನಿನ್ನೆಯಷ್ಟೇ ಬಂಧಿಸಿದ್ದರು.
ಈ ಪೈಕಿ ನಾಲ್ವರು ಯುವತಿಯರೂ ಸೇರಿದ್ದಾರೆ. ಓರ್ವ ಯು.ಕೆ. ಮೂಲದ ಸಾಗರೋತ್ತರ ಭಾರತೀಯ ಪ್ರಜೆಯಾಗಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿಸಿರುವ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw