ಗಾಂಜಾ ಸೇದಲು ಪ್ರೇರಣೆ ನೀಡಿದ್ರಾ ಪುನೀತ್ ಕೆರೆಹಳ್ಳಿ?
ಬೆಂಗಳೂರು: ಹಿಂದೂ ಧರ್ಮದ ರಕ್ಷಣೆಯ ಹೆಸರಿನಲ್ಲಿ ಪುನೀತ್ ಕೆರೆಹಳ್ಳಿ ಎಂಬಾತ ಗಾಂಜಾ ಸೇವನೆಗೆ ಕರೆ ನೀಡಿದ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರು ವಾಟ್ಸಾಪ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಗಾಂಜಾ ಸೇದಿ ನಾವು ಭಜನೆ ಮಾಡಬೇಕು, ಗಾಂಜಾ ಸೇದುವುದು ನಮ್ಮ ದೇಶದ ಪರಂಪರೆ, ಹಿಜಾಬ್ ಧರಿಸುವುದು ನಿಮ್ಮ ಹಕ್ಕಾದ್ರೆ ಗಾಂಜಾ ಸೇದುವುದು ನಮ್ಮ ಹಕ್ಕು ಎಂದು ಗಾಂಜಾ ಸೇದಲು ಯುವಕರಿಗೆ ಪ್ರೇರಣೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪುನೀತ್ ಕೆರೆಹಳ್ಳಿ ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ನಾವು ಭಂಗಿ ಸೇದುವುದರ ಮೂಲಕ ಹರಸ್ಮರಣೆ ಮಾಡಬೇಕು ಎಂದು ಅವರು ಕರೆ ನೀಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇನ್ನೂ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಕಾಲಂ ಬಗ್ಗೆ ಅವಹೇಳನಾಕಾರಿ ಮಾತನಾಡಿರುವ ಪುನೀತ್ ಕೆರೆ ಹಳ್ಳಿ, “ಅದೇ ಸಂವಿಧಾನದಲ್ಲಿ ಒಂದು ಕಾಲಂ ಇದೆಯಂತೆ, ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರದಂತೆ ಕಾಪಾಡುತ್ತಂತೆ, ಹಾಗಿದ್ರೆ, ನಮ್ಮೆಲ್ಲ ಧಾರ್ಮಿಕ ಆಚರಣೆಗಳನ್ನು ಮತ್ತೆ ಮರಳಿ ಆರಂಭಿಸಬೇಕಾಗುತ್ತದೆ. ನಾನು ಹೇಗೆ ಬೇಕಾದರೂ ಇರುತ್ತೇನೆ ಅದು ನನ್ನ ಧಾರ್ಮಿಕ ಹಕ್ಕು. ಅದೇನು ಕಿತ್ಕೊಳ್ತಿರೋ ಕಿತ್ಕೊಳ್ಳಿ… ಹಿಂದೂಗಳು ಹೀಗೇ ಬದುಕ್ತೀವಿ ನಾವು. ಹರಹರ ಮಹಾದೇವ್ ಶಂಭೋ ಶಿವಶಂಕರ ಎಂದು ಪುನೀತ್ ಕೆರೆಹಳ್ಳಿ ನಾಟಕದ ಪಾತ್ರಧಾರಿಯಂತೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಧಾರ್ಮಿಕ ಸ್ವಾತಂತ್ರ್ಯವನ್ನು ತಪ್ಪಾಗಿ ಅರ್ಥೈಸಲು ಪ್ರಯತ್ನಿಸಿರುವ ಪುನೀತ್ ಕೆರೆಹಳ್ಳಿ, ಯಾರು ಏನು ಬೇಕಾದರೂ ಮಾಡಬಹುದು ಎನ್ನುವ ಭಾವನೆಯನ್ನು ಸೃಷ್ಟಿಸಿರುವುದು ಕಂಡು ಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಯಾರನ್ನು ಏನು ಬೇಕಾದರೂ ಬೈಯಲು ಸಂವಿಧಾನದಲ್ಲಿ ಅವಕಾಶವಿಲ್ಲ. ಹಾಗೆಯೇ ಧಾರ್ಮಿಕ ಸ್ವಾತಂತ್ರ್ಯ ಎಂದ ಮಾತ್ರಕ್ಕೆ ಜನರ ದೈಹಿಕ, ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಗಾಂಜಾವನ್ನು ಸೇದಲು ಕರೆ ನೀಡುವುದೇ? ಹಿಂದೂ ಸಮಾಜದ ಮುಂದಿನ ಜನಾಂಗವನ್ನು ಎತ್ತ ಕೊಂಡೊಯ್ಯಲು ಇವರು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಇದೀಗ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯೇಸುವಿನ ಪ್ರತಿಮೆ ಧ್ವಂಸ: ಕ್ರಿಶ್ಚಿಯನ್ನರ ಮೇಲಿನ ದಾಳಿಗೆ ಉದಾಹರಣೆ: ಕ್ಯಾಥೋಲಿಕ್ ಬಿಷಪ್ ಗಳಿಂದ ಬೇಸರ
ವಿವಾದಿತ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವರ್ಗಾವಣೆ
ಮುಸ್ಲಿಮರ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಅನ್ಯಕೋಮಿನ ಐವರು ಪೊಲೀಸ್ ವಶಕ್ಕೆ
ಮಂಗಳೂರಿನ ಹಲವೆಡೆ ಗ್ಯಾಸ್ ವಾಸನೆ: ಆತಂಕಗೊಂಡ ಜನರು
ಕುಂಕುಮ ಇಟ್ಟು ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಕಾಲೇಜು!