ಗಾಂಜಾ ಸೇವಿಸಿದ್ದ 6 ಮಂದಿ ಯುವಕರನ್ನು ಬಂಧಿಸಿದ ಪೊಲೀಸರು
ಗಾಂಜಾ ಸೇವನೆ ಸಂಬಂಧಿಸಿ ಆರು ಯುವಕರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದ ಘಟನೆ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್ ನಲ್ಲಿ ಆ.20ರಂದು ನಡೆದಿದೆ.
ಆಶಿಶ್, ಅಕ್ಷಿತ್, ನಿಯಾಝ್, ಹರ್ಷವರ್ಧನ್, ವಿಶಾಲ್ ಹಾಗೂ ಆದಿತ್ಯ ಬರಂಬೆ ಪೊಲೀಸರು ವಶಕ್ಕೆ ಪಡೆದ ಆರೋಪಿಗಳು. ಇವರು ಬೀಚ್ ನಲ್ಲಿ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿದ್ದು, ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ ಆರು ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ಕಳವು:
ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಅನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಆ.20ರಂದು ಮಧ್ಯಾಹ್ನ ನಡೆದಿದೆ.
ಬ್ರಹ್ಮಾವರ ನಿವಾಸಿ ಹರೀಶ್ ಬೈಕ್ ಕಳೆದುಕೊಂಡ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ ಬ್ರಹ್ಮಾವರ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ, ವಂಡ್ಸೆಗೆ ಹೋಗಿದ್ದರು. ಬಳಿಕ ವಾಪಸ್ಸು ಬಂದು ನೋಡಿದಾಗ ಬೈಲ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ.
ಯಾರೋ ಕಳ್ಳರು ಬೈಕ್ ಹಾಗೂ ಅದರದಲ್ಲಿದ್ದ ಹೆಲ್ಮೆಟ್ ಕಳವುಮಾಡಿಕೊಂಡು ಹೋಗಿದ್ದಾರೆ. ಕಳವಾದ ಬೈಕ್ ನ ಅಂದಾಜುಮೌಲ್ಯ 25ಸಾವಿರ ರೂ. ಆಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka