ಗಂಟಲಲ್ಲಿ ದಾಳಿಂಬೆ ಬೀಜ ಸಿಲುಕಿ 10 ತಿಂಗಳ ಮಗುವಿನ ದಾರುಣ ಸಾವು
ಮಲಪ್ಪುರಂ: ದಾಳಿಂಬೆ ಬೀಜ ಗಂಟಲಲ್ಲಿ ಸಿಲುಕಿ 10 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ ಘಟನೆ ಮಲಪ್ಪುರಂ ಜಿಲ್ಲೆಯ ಎಡಕ್ಕರ ಎಂಬಲ್ಲಿ ನಡೆದಿದೆ.
ಎಡಕಾರ ನಿವಾಸಿ ಚೆರಾಯಿ ಕೂತ್ತಂಪಾರ ವಳ್ಳಿಕ್ಕಡನ್ ಫೈಸಲ್ ಅವರ ಪುತ್ರಿ ಫಾತಿಮಾ ಫರ್ಸಿನ್ ಮೃತ ಮಗು. ಮಗುವಿಗೆ ತಿನ್ನಲು ಕೊಟ್ಟ ದಾಳಿಂಬೆಯ ಬೀಜ ಗಂಟಲಿನಲ್ಲಿ ಸಿಲುಕಿಕೊಂಡ ಕಾರಣ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಕೂಡಲೇ ಪೋಷಕರು ಮಗುವನ್ನು ನಿಲಂಬೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಮಗು ಮೃತಪಟ್ಟ ಬೆನ್ನಲ್ಲೇ ದಿಕ್ಕುತೋಚದ ಪೋಷಕರ ರೋದನೆ ಮುಗಿಲು ಮುಟ್ಟಿದೆ. ಮಕ್ಕಳಿಗೆ ಘನರೂಪದ ಆಹಾರ ನೀಡುವ ವೇಳೆ ಸದಾ ಎಚ್ಚರಿಕೆಯಿಂದಿರಬೇಕು. ಸಾಧ್ಯವಾದರೆ ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುವಂತಹ ಆಹಾರಗಳನ್ನು ದ್ರವ ರೂಪದಲ್ಲಿ ಮಕ್ಕಳಿಗೆ ನೀಡುವುದು ಉತ್ತಮ.
ಇತ್ತೀಚೆಗೆ ಗಂಟಲಲ್ಲಿ ಆಹಾರ ಸಿಲುಕಿ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಪೋಷಕರಲ್ಲಿ ಮಕ್ಕಳಿಗೆ ನೀಡುವ ಆಹಾರಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯೋಗ ವ್ಯಕ್ತಿಗಾಗಿ ಮಾತ್ರವಲ್ಲ, ವಿಶ್ವಶಾಂತಿಗಾಗಿ: ಮೈಸೂರಿನಲ್ಲಿ ಪ್ರಧಾನಿ ಮೋದಿ ಮಾತುಗಳು
ಸ್ಯಾನಿಟೈಸರ್ ಕುಡಿಯುವ ಚಟ: ವ್ಯಾಪಾರಿಗಳಿಗೆ ತಲೆನೋವಾದ ಕೆಎಸ್ ಇಬಿ ನೌಕರ
ಶಾಸಕ ರಾಮ್ ದಾಸ್ ಬೆನ್ನಿಗೆ ಗುದ್ದುವಷ್ಟು ಪ್ರೀತಿ ಮೋದಿಜಿಗೆ ಯಾಕೆ?: ರಾಮ್ ದಾಸ್ ಏನು ಹೇಳಿದ್ರು?