ಗರ್ಭಿಣಿಯನ್ನು ಬೈಕ್ ​​ನಲ್ಲಿ ​​ ಕರೆತಂದ ಪತಿ: ಆಸ್ಪತ್ರೆ ಮುಂಭಾಗದಲ್ಲೇ ಹೆರಿಗೆ - Mahanayaka
10:11 AM Friday 20 - September 2024

ಗರ್ಭಿಣಿಯನ್ನು ಬೈಕ್ ​​ನಲ್ಲಿ ​​ ಕರೆತಂದ ಪತಿ: ಆಸ್ಪತ್ರೆ ಮುಂಭಾಗದಲ್ಲೇ ಹೆರಿಗೆ

mysore
04/02/2022

ಚಾಮರಾಜನಗರ: ಹೆರಿಗೆ ನೋವಲ್ಲಿದ್ದ ಪತ್ನಿಯನ್ನು ಪತಿ ಬೈಕ್ ​​ನಲ್ಲಿ ಕರೆತಂದಿರುವ ಘಟನೆ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ನಡೆದಿದೆ.

ಸೂಳೆಕೋಬೆ ಗ್ರಾಮದ ಕುಮಾರ್ ಎಂಬವರ ಪತ್ನಿ ಕವಿತಾ ಅವರಿಗೆ ಹೆರೆಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಬೈಕ್​​ ನಲ್ಲಿಯೇ ಕೂಡ್ಲೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಯಾರೂ ಇಲ್ಲದೇ ಆಸ್ಪತ್ರೆ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಿಡಿದುಕೊಳ್ಳುವುದೋ, ಪತ್ನಿಯನ್ನು ಸಂತೈಸುವುದೋ ಎಂದು ತೋಚದೇ ಪತಿ ಕುಮಾರ್ ಆಸ್ಪತ್ರೆ ಮುಂಭಾಗವೇ ಪರದಾಡಿದ್ದಾರೆ.

ಕವಿತಾ ಸೂಳೆಕೋಬೆ ತಾಯಿ ಮನೆ ಹೂಗ್ಯಂನಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ದಿಢೀರ್​​​ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಮಾರ್​​ ತನ್ನ ಬೈಕ್ ​​ನಲ್ಲಿಯೇ ಪತ್ನಿಯನ್ನು ಕೂರಿಸಿಕೊಂಡು 4-5 ಕಿ.ಮೀ. ದೂರವಿರುವ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದೇ ಬಾಗಿಲು ಮುಚ್ಚಿದ್ದರಿಂದ ಆಸ್ಪತ್ರೆ ಮುಂಭಾಗದಲ್ಲಿ ಕವಿತಾ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯ ಹತ್ತಿರದಲ್ಲಿದ್ದ ಸ್ಥಳೀಯರು ಇವರಿಗೆ ನೆರವಾಗಿದ್ದಾರೆ.


Provided by

ಈ ಕುರಿತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲ ಪ್ರತಿಕ್ರಿಯಿಸಿ, ಹನೂರು ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಎಂಬುದು ಮರಿಚಿಕೆಯಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದು, ಸಂಬಂಧಪಟ್ಟ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜನರ ಸಂಕಷ್ಟ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸ್ಥಳೀಯ ಚುನಾವಣೆ: ಬಿಜೆಪಿಯಿಂದ ತೃತೀಯ ಲಿಂಗಿಗಳಿಗೆ ಟಿಕೆಟ್

ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದಲೇ ಯುವಕನ ಕುಟುಂಬಕ್ಕೆ ಬಹಿಷ್ಕಾರ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್:  ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಕಾರಿಗೆ ಗುಂಡು ಹಾರಿಸಿ ಓವೈಸಿಯ ಹತ್ಯೆಗೆ ಯತ್ನ!

ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಗ್ಯಾಂಗ್ ರೇಪ್

 

ಇತ್ತೀಚಿನ ಸುದ್ದಿ