ಗರ್ಭಪಾತದ ವೇಳೆ ಅತ್ಯಾಚಾರ ಸಂತ್ರಸ್ತೆ ಸಾವು: ನಾಲ್ವರು ಅರೆಸ್ಟ್

ಮಹೊಬಾ: 6 ತಿಂಗಳ ಹಿಂದೆ ಅತ್ಯಾಚಾರಕ್ಕೆ ಗುರಿಯಾಗಿದ್ದ 20 ವರ್ಷ ವಯಸ್ಸಿನ ಮಹಿಳೆ, ಗರ್ಭಪಾತ ನಡೆಸುವ ವೇಳೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅತ್ಯಾಚಾರ ಆರೋಪಿ, ಆತನ ತಂದೆ, ಚಿಕ್ಕಪ್ಪ ಮತ್ತು ಖಾಸಗಿ ಆಸ್ಪತ್ರೆ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜಮೀನಿನಲ್ಲಿ ಕೆಲಸ ಮಾಡುವಾಗ 6 ತಿಂಗಳ ಹಿಂದೆ ಅತ್ಯಾಚಾರ ಎಸಗಲಾಗಿತ್ತು. ಈ ಬಗ್ಗೆ ದೂರು ನೀಡಿರಲಿಲ್ಲ. ಸೆ.25ರಂದು ಸಂತ್ರಸ್ತ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದ್ದು, ಈ ವೇಳೆ ಆಸ್ಪತ್ರೆಗೆ ಕರೆತಂದಾಗ ಆಕೆ ಗರ್ಭಿಣಿ ಎನ್ನುವುದು ಸಂಬಂಧಿಕರಿಗೆ ತಿಳಿದು ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಮಹಿಳೆಯು ಆಸ್ಪತ್ರೆಯಲ್ಲಿ ಮೃತಪಟ್ಟರು. ಬುಧವಾರ ಅತ್ಯಾಚಾರ ಸಂಬಂಧ ಶೈಲೇಂದ್ರ ಸಿಂಗ್ ಎಂಬಾತನ ಮೇಲೆ ಎಫ್ ಐಆರ್ ದಾಖಲಾಗಿದೆ. ಗರ್ಭಪಾತಕ್ಕೆ ಒತ್ತಡ ಹೇರಿದ್ದ ಆತನ ತಂದೆ, ಚಿಕ್ಕಪ್ಪನ ವಿರುದ್ಧ ಹಾಗೂ ಗರ್ಭಪಾತ ಚಿಕಿತ್ಸೆ ನಡೆಸಿದ ಆರೋಪದಡಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
BSPಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು | ಕಾರ್ಯಕರ್ತರ ಸಮಾವೇಶದಲ್ಲಿ ರಾಮ್ಜೀ ಗೌತಮ್ ಕರೆ
ಸೊಸೆಗೆ ಚಾಕುವಿನಿಂದ ಚುಚ್ಚಿದ ಅತ್ತೆ: ಸೊಸೆ ಮೃತಪಟ್ಟಿದ್ದಾಳೆ ಎಂದು ಭಾವಿಸಿ ಅತ್ತೆ ನೇಣಿಗೆ ಶರಣು
ಕೂದಲು ಉದುರುವಿಕೆ, ಎದೆ ಉರಿ ಸೇರಿದಂತೆ ಹಲವು ರೋಗಗಳ ನಿವಾರಣೆ ಅಲೋವೆರಾ ಉತ್ತಮ
ಕ್ಲಾಸ್ ನಲ್ಲಿ ಗಲಾಟೆ ಮಾಡಿದ ವಿದ್ಯಾರ್ಥಿಯ ಕಣ್ಣಿಗೆ ಪೆನ್ ಎಸೆದ ಶಿಕ್ಷಕಿಗೆ ಜೈಲು!
ತಮ್ಮ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಿದ ಪಂಜಾಬ್ ನ ಮಾಜಿ ಸಿಎಂ ಅಮರೀಂದರ್ ಸಿಂಗ್!
ಉದ್ಯೋಗ ನೀಡುವ ಬದಲು, ಬಿಜೆಪಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದೆ | ಕುಮಾರಸ್ವಾಮಿ