ಚುನಾವಣಾ ಕರ್ತವ್ಯ ನಿರ್ವಹಿಸಿದ್ದ ಗರ್ಭಿಣಿ ಅಧ್ಯಾಪಕಿ ಕೊರೊನಾಕ್ಕೆ ಬಲಿ
ಲಕ್ನೋ: ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 8 ತಿಂಗಳ ಗರ್ಭಿಣಿ ಅಧ್ಯಾಪಕಿ ಕಲ್ಯಾಣಿ ಕೊರೊನಾಕ್ಕೆ ಬಲಿಯಾಗಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅಧ್ಯಾಪಕಿಯ ಗರ್ಭದಲ್ಲಿದ್ದ ಮಗು ಕೂಡ ಸಾವನ್ನಪ್ಪಿದೆ.
ಉತ್ತರಪ್ರದೇಶದಲ್ಲಿ ಏಪ್ರಿಲ್ 15ಕ್ಕೆ ಪಂಚಾಯುತ್ ಚುನಾವಣೆ ನಡೆದಿತ್ತು. ಅಧ್ಯಾಪಕಿಯಾಗಿ ಕರ್ತವ್ಯಕ್ಕೆ ಹಾಜರಾಗಿ ತಿಂಗಳೊಳಗೆ ಈ ಘಟನೆ ನಡೆದಿದೆ. ತಾನು ಗರ್ಭೀಣಿಯಾಗಿರುವುದರಿಂದ ಚುನಾವಣೆ ಕೆಲಸ ನಿರ್ವಹಿಸುವುದು ಕಷ್ಟಕರ ಎಂದು ಮಹಿಳೆ ಇಲ್ಲಿನ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆದರೆ, ಚುನಾವಣೆ ಡ್ಯೂಟಿ ಮಾಡದಿದ್ದರೆ, ಕೇಸು ಹಾಕುತ್ತೇವೆ. ಸಂಬಳವೂ ನೀಡುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಬೆದರಿಕೆ ಹಾಕಿದ್ದರಿಂದ 32 ಕಿ.ಮೀ ದೂರದ ಮತಟ್ಟೆಗೆ ಏಪ್ರಿಲ್ 14ರಂದು ಅಧ್ಯಾಪಕಿ ತೆರಳಿದ್ದರು.
ಕರ್ತವ್ಯದ ಬಳಿಕ ಮನೆಗೆ ತೆರಳಿದ ಕಲ್ಯಾಣಿ ತೀವ್ರವಾಗಿ ಅನಾರೋಗ್ಯಕ್ಕೀಡಾಗಿದ್ದಾರೆ. ಆಸ್ಪತ್ರೆಗೆ ಅವರನ್ನು ದಾಖಲಿಸಿದ ಸಂದರ್ಭ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಮಹಿಳಾ ಚಿಕಿತ್ಸಾ ಕೇಂದ್ರಕ್ಕೆ ಅವರನ್ನು ದಾಖಲಿಸಲಾಗಿ