ಗರ್ಭಿಣಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ಹಳಿಯಲ್ಲಿ ಎಸೆದು ಹೋದ ಕಾಮುಕರು

bihara patna
27/09/2021

ಪಾಟ್ನಾ: ಗರ್ಭಿಣಿ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ಮೂವರು ಕಾಮುಕರು ಅತ್ಯಾಚಾರ ನಡೆಸಿ, ರೈಲ್ವೆ ಹಳೆಯಲ್ಲಿ ಎಸೆದು ಹೋದ ಅಮಾನವೀಯ ಘಟನೆ ಬಿಹಾರದ ಪಾಟ್ನಾ ಜಂಕ್ಷನ್ ಬಳಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಕಾಮುಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

24 ವರ್ಷ ವಯಸ್ಸಿ ಗರ್ಭಿಣಿ ಮಹಿಳೆ ಅತ್ಯಾಚಾರಕ್ಕೊಳಗಾದವರು ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ ಅವರು ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಯುವಕರು ಆಕೆಯನ್ನು ಅಡ್ಡಗಟ್ಟಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದು, ಬಳಿಕ ಅವರ ಇನ್ನೋರ್ವ ಸ್ನೇಹಿತನನ್ನೂ ಸ್ಥಳಕ್ಕೆ ಕರೆದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಪಾಟ್ನಾ ಜಂಕ್ಷನ್ ನ ರೈಲ್ವೇ ಹಳಿಯ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ.

ಯುವತಿ ಗರ್ಭಿಣಿ ಎನ್ನುವ ವಿಚಾರ ತಿಳಿದಿದ್ದರೂ, ಕಾಮುಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ರೈಲ್ವೆ ಹಳಿಗೆ ಆರೋಪಿಗಳು ಎಸೆದು ಹೋದ ಬಳಿಕ ಸಂತ್ರಸ್ತೆಗೆ ಎಚ್ಚರವಾಗಿದ್ದು, ಆಕೆ ಜೋರಾಗಿ ಕೂಗಿ ಜನರನ್ನು ನೆರವಿಗೆ ಕರೆದಿದ್ದು, ಈ ವೇಳೆ ಜನರು ಆಕೆಯ ನೆರವಿಗೆ ಧಾವಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿದ ಮಾಹಿತಿ ಆಧರಿಸಿ ವಿಶಾಲ್ ಹಾಗೂ ಅಂಕಿತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಘಟನೆ ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಬೆಂಗಳೂರಿನ ಪ್ಲೈಓವರ್ ಮೇಲೆ ಮತ್ತೊಂದು ಭೀಕರ ಅಪಘಾತ | ಯುವಕ, ಯುವತಿಯ ದಾರುಣ ಸಾವು

ಶಾಕಿಂಗ್ ನ್ಯೂಸ್: ಏಕಾಏಕಿ ಕುಸಿದು ಬಿದ್ದ ಮೂರು ಅಂತಸ್ತಿನ ಬೃಹತ್ ಕಟ್ಟಡ

ಭಾರತ್ ಬಂದ್: ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಸಾವಿರಾರು ವಾಹನಗಳು

ತನ್ನ ಸಹೋದ್ಯೋಗಿ ಮಹಿಳೆಯ ಮೇಲೆಯೇ ಅತ್ಯಾಚಾರ ನಡೆಸಿದ ವಾಯುಪಡೆಯ ಅಧಿಕಾರಿ!

ರಾಜ್ಯದಲ್ಲಿಯೂ ತಟ್ಟಿದ ಭಾರತ್ ಬಂದ್ ಬಿಸಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ತೀವ್ರ ಪ್ರತಿಭಟನೆ

ಸರ್ಕಾರಿ ಆಸ್ಪತ್ರೆಯ ಲಿಫ್ಟ್ ನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ | ವಾರ್ಡ್ ಬಾಯ್ ಅರೆಸ್ಟ್

ಇತ್ತೀಚಿನ ಸುದ್ದಿ

Exit mobile version