ಗರ್ಭಿಣಿಯರು ಕೂಡ ಲಸಿಕೆ ಪಡೆದುಕೊಳ್ಳಬಹುದು: ಮಾರ್ಗಸೂಚಿಯಲ್ಲಿ ಏನಿದೆ ? - Mahanayaka
12:20 AM Thursday 12 - December 2024

ಗರ್ಭಿಣಿಯರು ಕೂಡ ಲಸಿಕೆ ಪಡೆದುಕೊಳ್ಳಬಹುದು: ಮಾರ್ಗಸೂಚಿಯಲ್ಲಿ ಏನಿದೆ ?

covid 19
29/06/2021

ನವದೆಹಲಿ: ಗರ್ಭಿಣಿಯರು ಕೂಡ ಲಸಿಕೆ ಪಡೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದು, ಈ ಸಂಬಂಧ ಲಸಿಕೆ ಪಡೆಯಲು ಕೆಲವು ಮಾರ್ಗಸೂಚಿಗಳನ್ನು ಇಲಾಖೆ ಬಿಡುಗಡೆ ಮಾಡಿದೆ.

ಈಗ ಲಭ್ಯವಿರುವ ಕೊವಿಡ್ ಲಸಿಕೆಗಳು ಸುರಕ್ಷಿತವಾಗಿವೆ. ವ್ಯಾಕ್ಸಿನೇಷನ್ ಗರ್ಭಿಣಿಯರನ್ನು ಕೊರೊನಾ ಹಾಗೂ ಇತರ ರೋಗಗಳಿಂದ ರಕ್ಷಿಸುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಹೆಚ್ಚಿನ ಗರ್ಭಿಣಿಯರು ರೋಗ ಲಕ್ಷಣ ರಹಿತರಾಗಿರುತ್ತಾರೆ ಅಥವಾ ಕಡಿಮೆ ರೋಗ ಲಕ್ಷಣವನ್ನು ಹೊಂದಿರುತ್ತಾರೆ. ಆದರೆ ಅವರ ಆರೋಗ್ಯ ಶೀಘ್ರವಾಗಿ ಹದಗೆಡಬಹುದು. ಭ್ರೂಣದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಒಂದು ವೇಳೆ ಗರ್ಭಿಣಿಗೆ ಈಗಾಗಲೇ ಕೊರೊನಾ ಸೋಂಕು ತಗಲಿದ್ದರೆ, ಹೆರಿಗೆಯ ಬಳಿಕ ಆಕೆಗೆ ಲಸಿಕೆ ನೀಡಬೇಕು. ಲಸಿಕೆ ಚುಚ್ಚು ಮದ್ದನ್ನು ಪಡೆದ ನಂತರ ಸಣ್ಣ ಜ್ವರ, ಇಂಜೆಕ್ಷನ್ ಪಡೆದ ಸ್ಥಳದಲ್ಲಿ ನೋವು ಅಥವಾ 1-3 ದಿನಗಳವರೆಗೆ ಅನಾರೋಗ್ಯ ಇರಬಹುದು ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.

ಇನ್ನೂ ಲಸಿಕೆಗಾಗಿ ಕೊವಿನ್ ಪೋರ್ಟಲ್ ನಲ್ಲಿ ರಿಜಿಸ್ಟ್ರೇಷನ್ ಕಡ್ಡಾಯ ಮಾಡಲಾಗಿದೆ. ಆನಂತರ ಕೊವಿಡ್ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಕೊವಿಡ್ ವೈರಸ್ ನಿಂದ ಲಸಿಕೆಯು ಗರ್ಭಿಣಿಯರನ್ನು ರಕ್ಷಿಸುತ್ತದೆ ಎಂದು ಹೇಳಿದೆ.

ಇತ್ತೀಚಿನ ಸುದ್ದಿ