ಗರ್ಭಿಣಿಯೇ ಆಗದ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ್ದು ಹೇಗೆ? | 10 ಮಕ್ಕಳ ರಹಸ್ಯ ಬಯಲು!
ದಕ್ಷಿಣ ಆಫ್ರಿಕಾ: ಮಹಿಳೆಯೊಬ್ಬರು 10 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನುವು ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಇದೀಗ ಈ ಮಹಿಳೆಯ ಪತಿ ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿರುವುದು ಬಯಲಾಗಿದೆ.
ಗೋಸಿಯಾಮ್ ತಮಾರಾ ಸಿಥೋಲ್ ಎಂಬ ದಕ್ಷಿಣ ಆಫ್ರಿಕಾದ ಮಹಿಳೆ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ ಎಂದು ವಿಶ್ವದಾದ್ಯಂತ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, ಈ ಮಹಿಳೆಯನ್ನು ಪರೀಕ್ಷೆ ನಡೆಸಿದಾಗ ಮಹಿಳೆ ತಾನು 10 ಮಕ್ಕಳನ್ನು ಹೆತ್ತಿದ್ದಾರೆ ಎಂದು ಹೇಳಲಾಗಿದ್ದ ಸಂದರ್ಭದಲ್ಲಿ ಆಕೆ ಗರ್ಭಿಣಿಯೇ ಆಗಿರಲಿಲ್ಲ. ಆಕೆ ಇತ್ತೀಚಿನ ದಿನಗಳ ವರೆಗೂ ಗರ್ಭಿಭಿಯೇ ಆಗಿರಲಿಲ್ಲ ಎಂದು ತಿಳಿದು ಬಂದಿದೆ.
ಇನ್ನು 10 ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಾಗಿ ವರದಿಯಾಗಿದ್ದರೂ ಇಲ್ಲಿಯವರೆಗೆ ಮಕ್ಕಳ ಚಿತ್ರವೇ ಬಿಡುಗಡೆಯಾಗಿಲ್ಲ. ಈ ಬಗ್ಗೆ ಅವರ ಪತಿ ಟೋಬೊ ಸೊಟೆಟ್ಸಿ ಅವರನ್ನು ಪಶ್ನಿಸಿದರೆ, ನಾನು ಮಗುವನ್ನು ನೋಡಿಲ್ಲ ಎಂದು ಹೇಳುತ್ತಿದ್ದಾರೆ. ಈ ಅವಧಿಯಲ್ಲಿ ಈ ಮಹಿಳೆ ಯಾವುದೇ ಆಸ್ಪತ್ರೆಯಲ್ಲಿಯೂ ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ.
ಮಹಿಳೆಯ ಪತಿ ಟೋಬೊ ಹಣ ಸಂಪಾದಿಸಲು ಈ ರೀತಿಯ ಸುಳ್ಳುಗಳನ್ನು ಹೆಣೆದಿದ್ದಾನೆ ಎಂದು ಹೇಳಲಾಗಿದೆ. ಇದೀಗ ಪತಿಯ ಸುಳ್ಳುಗಳಿಂದಾಗಿ ಪತ್ನಿ ಸಿಟೋಲ್ ಅವರನ್ನು ಆರೋಗ್ಯ ಸಿಬ್ಬಂದ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿರುವ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಮನೋವೈದ್ಯರಿಂದ ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನೂ ಸಿಟೋಲ್ ಬಗ್ಗೆ ಮೊದಲು ಸುದ್ದಿ ವರದಿ ಮಾಡಿದ ಮಾಧ್ಯಮಗಳು ಓದುಗರ ಕ್ಷಮೆಯನ್ನು ಯಾಚಿಸಿವೆ. ಸಿಥೋಲ್ ಹಾಗೂ ಪತಿ ಹೇಳಿದ ಮಾತನ್ನು ಪರಿಶೀಲಿಸದೇ ಸುದ್ದಿಗಳನ್ನು ಹಾಕಿರುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕ್ಷಮೆ ಯಾಚಿಸಿದ್ದಾರೆ.