ಅಪಾಯಕಾರಿ ಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿರುವ ಕಾಂತಮಂಗಲ ರೈ ಗ್ಯಾಸ್ ಗೋಡಾನ್ ಗೆ ಸಮಾಜಕಲ್ಯಾಣ ಅಧಿಕಾರಿ ಭೇಟಿ: ಗೋಡಾನ್ ಸಿಬ್ಬಂದಿಗೆ ಎಚ್ಚರಿಕೆ - Mahanayaka

ಅಪಾಯಕಾರಿ ಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿರುವ ಕಾಂತಮಂಗಲ ರೈ ಗ್ಯಾಸ್ ಗೋಡಾನ್ ಗೆ ಸಮಾಜಕಲ್ಯಾಣ ಅಧಿಕಾರಿ ಭೇಟಿ: ಗೋಡಾನ್ ಸಿಬ್ಬಂದಿಗೆ ಎಚ್ಚರಿಕೆ

godown
18/09/2023

ಸುಳ್ಯ/ದಕ್ಷಿಣ ಕನ್ನಡ: ರೈ ಇಂಡೇನ್ ಗ್ಯಾಸ್ ಏಜೆನ್ಸಿ ಸುಳ್ಯ ಇದರ ಕಾಂತಮಂಗಲ ಗೋಡಾನ್ ನಲ್ಲಿ ಅವೈಜ್ಞಾನಿಕವಾಗಿ ಸಿಲಿಂಡರ್ ಶೇಖರಣೆ ಮಾಡಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ.ಜಾತಿ/ಪಂಗಡದ ಕುಂದು ಕೊರತೆ ಸಭೆಯಲ್ಲಿ ಸತೀಶ್ ಬೂಡುಮಕ್ಕಿ ಅವರು ತಹಶೀಲ್ದಾರರಿಗೆ ವಿವರವಾದ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸುಳ್ಯ ಸಮಾಜಕಲ್ಯಾಣ ಅಧಿಕಾರಿಗಳಾದ ಧನಂಜಯ ರವರು ಗೋಡಾನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಗೋಡಾನ್ ಗೆ ಬೀಗ ಹಾಕಲಾಗಿದ್ದು ,ಗೋಡಾನ್ ಗೇಟ್ ಹೊರಗಡೆ ದೂರದಲ್ಲಿನ ಗ್ಯಾಸ್ ಸಿಬ್ಬಂದಿಗಳ ವಿಶ್ರಾಂತಿ ರೂಮ್ ಬಳಿ ತುಂಬಿದ ಸಿಲಿಂಡರ್ ಗಳನ್ನು ಯಾವುದೇ ಸುರಕ್ಷಿತವಲ್ಲದ ರೀತಿಯಲ್ಲಿ ಇಟ್ಟು ಗ್ರಾಹಕರಿಗೆ ನೀಡುತ್ತಿರುವುದು ಕಂಡು ಬಂದಿದೆ.

ಈ ವೇಳೆ ಗೋಡಾನ್ ಸಿಬ್ಬಂದಿಯನ್ನು ಪ್ರಶ್ನಿಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಹಾಗೂ ಈ ಬಗ್ಗೆ ಕೂಡಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮನವಿದಾರರಾದ ಸತೀಶ್ ಬೂಡುಮಕ್ಕಿ ಅವರಿಗೆ ಭರವಸೆ ನೀಡಿದರು.


Provided by

ಈ ಸಂದರ್ಭದಲ್ಲಿ ಸ್ಥಳೀಯರಾದ ಸುನೀಲ್ ಬಿ.ಆರ್. ಕಾಂತಮಂಗಲ ಅವರು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ ಬಳಿಕವೂ ಏಜೆನ್ಸಿ ಅವರು ಯಾವುದೇ ಭಯವಿಲ್ಲದ ರೀತಿಯಲ್ಲಿ ಇದುವರೆಗೆ ಇಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದು ದೂರಿಕೊಂಡರು. ದಯಾನಂದ ಕಾಂತಮಂಗಲರವರು ಹಾಜರಿದ್ದರು.

ಇತ್ತೀಚಿನ ಸುದ್ದಿ