ಆತಂಕ: ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದ ಟ್ಯಾಂಕರ್ ನಿಂದ ಅನಿಲ ಸೋರಿಕೆ! - Mahanayaka
7:25 AM Wednesday 18 - September 2024

ಆತಂಕ: ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದ ಟ್ಯಾಂಕರ್ ನಿಂದ ಅನಿಲ ಸೋರಿಕೆ!

gangavali
17/07/2024

ಕಾರವಾರ: ಏಕಾಏಕಿ ಗುಡ್ಡ ಕುಸಿದ ಪರಿಣಾಮ ಗಂಗಾವಳಿ ನದಿಗೆ ಬಿದ್ದು ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಆಗುತ್ತಿರುವ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಗಂಗಾವಳಿ ನದಿಗೆ ಬಿದ್ದ ಬಳಿಕ ಸುಮಾರು 7 ಕಿ.ಮೀ. ದೂರದವರೆಗೆ ಟ್ಯಾಂಕರ್  ಕೊಚ್ಚಿಹೋಗಿತ್ತು.  ಇದೀಗ ಸಗಡಗೇರಿ ಎಂಬಲ್ಲಿ ಟ್ಯಾಂಕರ್ ವಾಲಿ ನಿಂತಿದೆ. ಗ್ಯಾಸ್ ಟ್ಯಾಂಕರ್ ಸ್ಥಿತಿಯನ್ನು ಬೋಟ್ ಮೂಲಕ ತೆರಳಿ ಭಾರತ್ ಗ್ಯಾಸ್ ತಜ್ಞರು ಪರಿಶೀಲನೆ ನಡೆಸಿದ ವೇಳೆ ಗ್ಯಾಸ್ ಸೋರಿಕೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ನೀರಿನಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್ ನಲ್ಲಿರುವ ಗ್ಯಾಸ್ ಸೋರಿಕೆಯಾಗುತ್ತಿರುವುದು ಅಪಾಯಕಾರಿಯಾಗಿದೆ. ಶೀಘ್ರವಾಗಿ ಟ್ಯಾಂಕರ್ ನಲ್ಲಿರುವ ಗ್ಯಾಸ್ ನ್ನು ಬೇರೆ ಗ್ಯಾಸ್ ಗೆ ವರ್ಗಾಯಿಸಬೇಕಿದೆ. ಆದರೆ ನದಿಯ ಮಧ್ಯೆ ಇರುವ ಟ್ಯಾಂಕರ್ ನಿಂದ ಹೇಗೆ ಗ್ಯಾಸ್ ನ್ನು ಬೇರೆ ಟ್ಯಾಂಕರ್ ಗೆ ವರ್ಗಾಯಿಸಬೇಕು ಎನ್ನುವುದು ಸವಾಲಿನ ವಿಚಾರವಾಗಿದೆ.


Provided by

ಈ ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿತ್ತು. ಮಾಹಿತಿಗಳ ಪ್ರಕಾರ ಟ್ಯಾಂಕರ್ ನಲ್ಲಿ ಸುಮಾರು 30 ಟನ್ ಅನಿಲವಿದೆ. ಇದೀಗ ಗ್ಯಾಸ್ ಸೋರಿಕೆಯಾಗುತ್ತಿರುವ ಹಿನ್ನೆಲೆ ಈ ಪರಿಸರದಲ್ಲಿ ಬೆಂಕಿ ಒಲೆ ಹಾಗೂ ವಿದ್ಯುತ್ ಹಚ್ಚದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ