ಮದ್ಯದ ಪಾರ್ಟಿ: ‘ಗಟ್ಟಿಮೇಳ’ ಧಾರಾವಾಹಿಯ ನಟ ರಕ್ಷಿತ್‌ ವಿರುದ್ಧ ಪ್ರಕರಣ

gattymela rakshith
29/01/2022

ಬೆಂಗಳೂರು: ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದ್ದರೂ ಮದ್ಯದ ಪಾರ್ಟಿ ಆಯೋಜಿಸಿ ಗುಂಪು ಸೇರಿದ್ದ ಆರೋಪದಡಿ ಕಿರುತೆರೆ ನಟ ರಕ್ಷಿತ್‌ ಹಾಗೂ ಅವರ ಸ್ನೇಹಿತರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ರಕ್ಷಿತ್‌ ಹಾಗೂ ಸ್ನೇಹಿತರು, ಕೆಂಗೇರಿ ಬಳಿಯ ಜಿಂಜರ್‌ ಲೇಕ್‌ ವ್ಯೂ ಹೊಟೇಲ್‌ನಲ್ಲಿ ರಾತ್ರಿ 1.30ರ ಸುಮಾರಿಗೆ ಪಾರ್ಟಿ ಮಾಡುತ್ತಿದ್ದರು. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ವಾಹನದ ಸಿಬ್ಬಂದಿ ಹಾಗೂ ಇನ್‌ಸ್ಪೆಕ್ಟರ್‌, ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಎಂದು ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕು ತಡೆಯಲು ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂಥ ಸಂದರ್ಭದಲ್ಲೇ ರಕ್ಷಿತ್‌ ಹಾಗೂ ಅವರ ಸ್ನೇಹಿತರು ಹೊಟೇಲ್‌ ನಲ್ಲಿ ಪಾರ್ಟಿ ಮಾಡುತ್ತಿದ್ದರು. ಹೀಗಾಗಿ ಅವರೆಲ್ಲರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಕೊಳ್ಳಲಾಗಿದೆ. ನೊಟೀಸ್‌ ನೀಡಿ ಠಾಣೆಯಿಂದ ಕಳುಹಿಸಲಾಗಿದೆ. ಎಂದು ತಿಳಿಸಿದ್ದಾರೆ.

ಗಟ್ಟಿಮೇಳ ಧಾರವಾಹಿಯ ನಟನೆಂದು ತಿಳಿಸಿದ್ದ ರಕ್ಷಿತ್‌, ಶೂಟಿಂಗ್‌ ಮುಗಿಸಿ ಸ್ನೇಹಿತರ ಜೊತೆ ಊಟಕ್ಕೆಂದು ಹೊಟೇಲ್‌ ಬಂದಿದ್ದಾಗಿ ಹೇಳಿಕೆ ನೀಡಿದ್ದಾರೆ. ಪಾರ್ಟಿ ಮಾಡಲು ಅವಕಾಶ ನೀಡಿದ್ದ ಹೊಟೇಲ್‌ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಕ್ಷಿತ್‌ ಹಾಗೂ ಇತರರು ಮದ್ಯ ಕುಡಿದಿದ್ದರು ಅಮಲಿನಲ್ಲಿ ಚೀರಾಡುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆಯೂ ಮಾಹಿತಿ ಹಾಕಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೋಟ್ ದುರಂತ: ಇಬ್ಬರು ಅಪ್ರಾಪ್ತರು ನಾಪತ್ತೆ, 10 ಮಂದಿ ರಕ್ಷಣೆ

ಪತ್ನಿಯ ಅನುಮಾನಾಸ್ಪದ ಸಾವು: ಇಡೀ ರಾತ್ರಿ ಮೃತದೇಹದೊಂದಿಗೆ ಕಾಲ ಕಳೆದ ಪತಿ

ದೇಶದಲ್ಲೇ ಬಿಎಸ್ಪಿ ಎರಡನೇ ಶ್ರೀಮಂತ ಪಕ್ಷ, ಮೊದಲ ಸ್ಥಾನದಲ್ಲಿ ಬಿಜೆಪಿ

ಗುಂಡೇಟಿಗೆ ಕಾಡಾನೆ ಬಲಿ

ಬೈಕ್‌ ಗೆ ಅಪರಿಚಿತ ವಾಹನ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

Exit mobile version