ಭಿವಾನಿಯಲ್ಲಿ ಮುಸ್ಲಿಂ ಯುವಕರ ಹತ್ಯೆ ಕೇಸ್: ಸಲ್ಲಿಕೆಯಾದ ಚಾರ್ಚ್‌ಶೀಟ್‌ ನಲ್ಲಿ ಬೆಚ್ಚಿಬೀಳಿಸೋ ಸಂಗತಿಗಳು..! - Mahanayaka

ಭಿವಾನಿಯಲ್ಲಿ ಮುಸ್ಲಿಂ ಯುವಕರ ಹತ್ಯೆ ಕೇಸ್: ಸಲ್ಲಿಕೆಯಾದ ಚಾರ್ಚ್‌ಶೀಟ್‌ ನಲ್ಲಿ ಬೆಚ್ಚಿಬೀಳಿಸೋ ಸಂಗತಿಗಳು..!

02/06/2023

ದೇಶದಲ್ಲಿ ಭಾರೀ ಸುದ್ದಿಯಾಗಿದ್ದ ರಾಜಸ್ಥಾನ ರಾಜ್ಯದ ಭರತಪುರದ ಜುನೈದ್‌ ಮತ್ತು ನಾಸಿರ್ ಎಂಬುವವರು ಹರ್ಯಾಣದ ಭಿವಾನಿಯಲ್ಲಿ ವಾಹನದ ಒಳಗಡೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ಚಾರ್ಚ್‌ಶೀಟ್‌ ಸಲ್ಲಿಸಿದ್ದಾರೆ.


Provided by

ಜುನೈದ್‌ ಮತ್ತು ನಾಸಿರ್‌ ಅವರನ್ನು ಗೋರಕ್ಷಕರು ಗಂಭೀರವಾಗಿ ಹಲ್ಲೆಗೈದು ನಂತರ ಅವರನ್ನು ಹರ್ಯಾಣದ ಪೊಲೀಸ್‌ ಠಾಣೆಗೆ ಕರೆದೊಯ್ದರೂ ಅದರಲ್ಲಿ ದನಗಳು ಇರಲಿಲ್ಲ ಎಂಬ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು ವಾಪಸ್‌ ಕಳುಹಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯು ಫೆಬ್ರವರಿಯಲ್ಲಿ ನಡೆದಿತ್ತು. ಆದರೆ ಮೇ 16ರಂದು ರಾಜಸ್ಥಾನ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಈ ಚಾರ್ಜ್‌ಶೀಟ್‌ನಲ್ಲಿ ಭಜರಂಗದಳದ ಮೋನು ಮನೇಸರ್‌ ಸೇರಿದಂತೆ 27 ಮಂದಿಯನ್ನು ಶಂಕಿತರು ಎಂದು ಗುರುತಿಸಲಾಗಿದೆ.


Provided by

ಬಂಧಿತ ಆರೋಪಿ ರಿಂಕುವಿನ ವಾಟ್ಸ್ಯಾಪ್‌ ವಿವರಗಳು ಹಾಗೂ ಮೊಬೈಲ್‌ ಮಾಹಿತಿ ವಿವರಗಳು ಹಾಗೂ ಸಿಡಿಆರ್‌ ವಿಶ್ಲೇಷಣೆಯಿಂದ ಆತನಿಗೆ ನಾಸಿರ್‌ ಮತ್ತು ಜುನೈದ್‌ ಅವರ ಬೊಲೆರೋ ಹೋಗುತ್ತಿದ್ದ ಮಾರ್ಗದ ಬಗ್ಗೆ ಮಾಹಿತಿ ಇತ್ತು ಹಾಗೂ ರಿಂಕು ನಂಟು ಹೊಂದಿದ್ದ ಗೋರಕ್ಷಕರ ತಂಡವು ಈ ವಾಹನವನ್ನು ಅಡ್ಡಗಟ್ಟಿತ್ತು ಎಂದು ಚಾರ್ಜ್‌ಶೀಟ್‌ ಹೇಳಿದೆ.

ಗೋರಕ್ಷಕರು ಪಿರುಕ ಗ್ರಾಮದಲ್ಲಿ ವಾಹನ ತಡೆದು ನಿಲ್ಲಿಸಿ ದನಗಳನ್ನು ನೋಡಬೇಕೆಂದು ಹೇಳಿದ್ದರು. ಆದರೆ ವಾಹನದಲ್ಲಿ ದನಗಳು ಇರಲಿಲ್ಲ, ಆದರೂ ಗೋಗಿ, ಮೋನು ರಾನಾ, ವಿಕಾಸ್‌ ಆರ್ಯ, ವಿಶಾಲ್‌ ಜವ್ಲಿ, ಕಾಲು ಕೈತಾಲ್‌, ಶಶಿಕಾಂತ್‌, ಶಿವಂ, ಕಿಶೋರ್‌, ಬದಲ್‌ ಪಿಂಗವನ್‌ ಇತರರು ನಾಸಿರ್‌ ಮತ್ತು ಜುನೈದ್‌ ಮೇಲೆ ತೀವ್ರ ಹಲ್ಲೆಗೈದು ನಂತರ ಈ ಕೃತ್ಯವನ್ನು ಯೋಜಿಸಿದ್ದ ರಿಂಕು ಸೈನಿ ಜೊತೆ ಮಾತನಾಡಿದ್ದರು ಎಂದು ಚಾರ್ಜ್‌ ಶೀಟ್‌ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ