ಗಾಝಾ‌ ಮೇಲೆ ದಾಳಿ: ಇಸ್ರೇಲ್ ಮೇಲೆ ಹರೇದಿ ಸಮುದಾಯದ ಕೆಂಗಣ್ಣು - Mahanayaka
10:24 AM Sunday 8 - September 2024

ಗಾಝಾ‌ ಮೇಲೆ ದಾಳಿ: ಇಸ್ರೇಲ್ ಮೇಲೆ ಹರೇದಿ ಸಮುದಾಯದ ಕೆಂಗಣ್ಣು

17/07/2024

ಗಾಝಾದ ಮೇಲೆ ದಾಳಿ ಮುಂದುವರಿಸಿರುವ ನೆತನ್ಯಾಹು ಸರ್ಕಾರಕ್ಕೆ ಇಸ್ರೇಲ್ ನ ತೀವ್ರ ಸಂಪ್ರದಾಯವಾದಿ ಯಹೂದಿ ಸಮುದಾಯವಾಗಿರುವ ಹರೇದಿ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೊಳಿಸುವುದಕ್ಕೆ ನಾವು ಒಪ್ಪಲ್ಲ ಎಂದವರು ಹೇಳಿದ್ದಾರೆ. ಮಧ್ಯ ಇಸ್ರೇಲಿನ ಹೈವೇಯನ್ನು ತಡೆದು ಅವರು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಮತ್ತು ಈ ಪ್ರತಿಭಟನಾಕಾರರ ನಡುವೆ ಘರ್ಷಣೆಯೂ ನಡೆದಿದೆ. ತೀವ್ರ ಪ್ರತಿಭಟನೆಯ ನಡುವೆಯೇ ಈ ಸಂಪ್ರದಾಯವಾದಿ ಯಹೂದಿ ಸಮುದಾಯವನ್ನು ಸೇನೆಗೆ ಸೇರಿಸಿಕೊಳ್ಳುವುದಕ್ಕೆ ಸರಕಾರ ಮುಂದಾಗಿತ್ತು. ಮುಂದಿನ ಆದಿತ್ಯವಾರದಿಂದ ಈ ಸಮುದಾಯದ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಸರಕಾರ ಸಿದ್ಧತೆ ನಡೆಸಿತ್ತು. ಈ ಮಾಹಿತಿ ಬಹಿರಂಗಗೊಂಡನೆ ಇದೀಗ ಈ ಸಮುದಾಯದ ಮಂದಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ದಿನದ ಹಿಂದೆ ಹರೇದಿ ಸಮುದಾಯದ ಯುವಕರು ಇಬ್ಬರು ಇಸ್ರೇಲಿ ಸೈನಿಕರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಆಕ್ರಮಣ ನಡೆಸಿದ್ದರು. ನೀವು ಕೊಲೆಪಾತಕಿಗಳು ಎಂದು ಆಕ್ರೋಶ ವ್ಯಕ್ತಪಡಿಸಿ ಗ್ಲಾಸ್ ಗಳನ್ನು ಎಸೆದಿದ್ದರು. ಈ ಘಟನೆಯಲ್ಲಿ ಸೈನಿಕರಿಗೆ ಗಾಯವೂ ಆಗಿತ್ತು.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ