ಇಸ್ರೇಲ್ ನಿಂದ ಗಾಝಾ ವಂಶವಾಹಿ ಹತ್ಯೆ: ಕರಾಳ ಮಾಹಿತಿಯನ್ನು ಬಿಚ್ಚಿಟ್ಟ ಪತ್ರಕರ್ತ
ಗಾಝಾದಲ್ಲಿ ಸಾಮಾನ್ಯ ಜನರನ್ನು ಕೊಲ್ಲುವ ಮೂಲಕ ಇಸ್ರೇಲ್ ನಡೆಸುತ್ತಿರುವ ವಂಶ ಹತ್ಯೆಯನ್ನು ತಡೆಯಬೇಕು ಎಂದು ಆಗ್ರಹಿಸಿ ಅಮೆರಿಕಾದ ಪತ್ರಕರ್ತ ಸ್ವಯಂ ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ.
ಫೆಲೆಸ್ತೀನಿಯರಿಗೆ ಬೆಂಬಲ ಸೂಚಿಸಿ ಅಮೇರಿಕಾದ ವಾಷಿಂಗ್ಟನ್ ನಲ್ಲಿ ಸಾವಿರಾರು ಮಂದಿ ಸೇರಿದ ಸಭೆಯಲ್ಲಿ ಸಾಮೂವೆಲ್ ಮೆನ ಜೂನಿಯರ್ ಎಂಬ ಪತ್ರಕರ್ತ ವೈಟ್ ಹೌಸ್ ಮುಂದೆ ತನ್ನ ಕೈಗೆ ಬೆಂಕಿ ಹಚ್ಚಿಕೊಂಡಿದ್ದಾರೆ.
ನಾವು ಅಮೆರಿಕಾದ ಪತ್ರಕರ್ತರು. ಆದರೆ ಸತ್ಯವನ್ನು ನಾಶ ಮಾಡುವ ಕಾರ್ಪೊರೇಟರ್ ಶಕ್ತಿಗಳ ಕೈಯಲ್ಲಿ ನಮ್ಮನ್ನಾಳುವವರು ದಾಳವಾಗುತ್ತಿರುವುದನ್ನು ನೋಡುತ್ತಿರುವ ದುರ್ದೈವಿಗಳು ಎಂದು ಮೆನ ಅವರು ತಮ್ಮ ಎಕ್ಸ್ ಜಾಲತಾಣದಲ್ಲಿ ಹಾಕಿರುವ ಪೋಸ್ಟನಲ್ಲಿ ತಿಳಿಸಿದ್ದಾರೆ.
ಇಸ್ರೇಲ್ ನ ಕ್ರೌರ್ಯದಲ್ಲಿ ಕೈ ಕಾಲುಗಳನ್ನು ಕಳಕೊಂಡಿರುವ ಹದಿನೈದು ಸಾವಿರಕ್ಕಿಂತಲೂ ಅಧಿಕ ಗಾಝಾದ ಮಕ್ಕಳೇ, ನಾನು ನನ್ನ ಎಡ ಕೈಯನ್ನು ನಿಮಗಾಗಿ ಸಮರ್ಪಿಸುತ್ತಿದ್ದೇನೆ. ನಿಮ್ಮ ಧ್ವನಿಯನ್ನು ಜಗತ್ತಿಗೆ ತಿಳಿಸುವುದಕ್ಕಾಗಿ ನನ್ನ ಕೈಯನ್ನು ನೀಡುತ್ತಿದ್ದೇನೆ. ನಿಮ್ಮ ಮುಗುಳು ನಗು ಎಂದೂ ಬತ್ತದಿರುವಂತೆ ನಾನು ಪ್ರಾರ್ಥಿಸುತ್ತೇನೆ ಎಂದು ಮೆನ ತನ್ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಪ್ರತಿಭಟನಾಕಾರರು ಮತ್ತು ಪೊಲೀಸರು ತಕ್ಷಣ ಸುತ್ತುವರೆದು ಮೆನ ಅವರ ಕೈಗೆ ಹತ್ತಿರುವ ಬೆಂಕಿಯನ್ನು ನಂದಿಸಿದ್ದಾರೆ ಮತ್ತು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಈ ಘಟನೆಯ ಬಳಿಕ ಅವರನ್ನು ಕೆಲಸದಿಂದ ವಜಾ ಮಾಡಿರುವುದಾಗಿ ಪತ್ರಿಕಾ ಸಂಸ್ಥೆ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth