ಮೃತದೇಹಗಳ ಕೊಂಪೆಯಾಗಿ ಮಾರ್ಪಟ್ಟ ಗಾಝಾ: ಪ್ರತಿ ಹೆಜ್ಜೆಯಲ್ಲೂ ಇದೆ ಶವಗಳು..! - Mahanayaka
3:11 AM Friday 20 - September 2024

ಮೃತದೇಹಗಳ ಕೊಂಪೆಯಾಗಿ ಮಾರ್ಪಟ್ಟ ಗಾಝಾ: ಪ್ರತಿ ಹೆಜ್ಜೆಯಲ್ಲೂ ಇದೆ ಶವಗಳು..!

14/07/2024

ಫೆಲೆಸ್ತೀನಿನ ಗಾಝಾ ನಗರವು ಮೃತದೇಹಗಳ ಕೊಂಪೆಯಾಗಿ ಮಾರ್ಪಟ್ಟಿದೆ. ನಗರದ ದಾರಿಯಲ್ಲಿ ಡಜನ್‌ಗಟ್ಟಲೆ ಮೃತದೇಹಗಳು ಪತ್ತೆಯಾಗಿವೆ. ಸಾಕಷ್ಟು ಮೃತದೇಹಗಳು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಬಾಕಿಯಾಗಿವೆ ಎಂದು ತಿಳಿದುಬಂದಿದೆ.

ಗಾಝಾ ನಗರದ ಹತ್ತಿರವಿರುವ ಟೆಲ್ ಅಲ್ ಹವಾ ಎಂಬಲ್ಲಿ ಮತ್ತು ಅದರ ಹತ್ತಿರದ ಪ್ರದೇಶಗಳಲ್ಲಿ 79 ದೇಹಗಳನ್ನು ಪತ್ತೆಹಚ್ಚಲಾಗಿದೆ. ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಒಂದೇ ಕುಟುಂಬದ ಹಲವರು ಇದರಲ್ಲಿ ಸೇರಿದ್ದಾರೆ ಎಂದು ವರದಿಯಾಗಿದೆ.

ಕಳೆದ ಶುಕ್ರವಾರ ಇಸ್ರೇಲ್ ಇಲ್ಲಿಗೆ ದಾಳಿ ಮಾಡಿತ್ತು. ಇಲ್ಲಿಯ ಪರಿಸ್ಥಿತಿ ಭಯಾನಕವಾಗಿದೆ. ವೈಮಾನಿಕ ದಾಳಿಯ ಬಳಿಕ ಮೃತಪಟ್ಟವರ ಮೃತ ದೇಹವನ್ನು ಸಾಗಿಸುವುದಕ್ಕಾಗಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕಾಗಲಿ ಇಸ್ರೇಲ್ ಬಿಡುತ್ತಿಲ್ಲ. ಶುಜಯ್ಯ ಎಂಬ ಪ್ರದೇಶದಲ್ಲೂ ಪರಿಸ್ಥಿತಿ ಇದೇ ರೀತಿಯಾಗಿದೆ. ತಾತ್ಕಾಲಿಕ ಶಿಬಿರಗಳಲ್ಲಿ ತುಂಬಿ ತುಳುಕುತ್ತಿರುವವರಲ್ಲಿ ಹೆಚ್ಚಿನ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ರಫ ಮತ್ತು ಮಧ್ಯ ಗಾಝಾದ ಪ್ರದೇಶಗಳ ಮೇಲೆ ಮತ್ತು ನಿರಾಶ್ರಿತ ಶಿಬಿರಗಳ ಮೇಲೆ ಕೂಡ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ಅನೇಕರ ಸಾವು ನೋವಿಗೆ ಕಾರಣವಾಗಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ