ಗಾಝಾದ ಭೀಕರತೆ ಮತ್ತೊಮ್ಮೆ ಅನಾವರಣ: ಗಾಯಗೊಂಡ ತಂಗಿಯನ್ನು ಆಸ್ಪತ್ರೆಗೆ ಸೇರಿಸಲು ಅಕ್ಕಳ ಹರಸಾಹಸ

23/10/2024

ಗಾಝಾದಲ್ಲಿ ಯುದ್ಧದ ಭೀಕರತೆಯ ನಡುವೆ ಪುಟ್ಟ ಬಾಲಕಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಲಕಿ ರಸ್ತೆಯಲ್ಲಿ ತನ್ನ ಪುಟ್ಟ ತಂಗಿಯನ್ನ ಹೊತ್ತಿಕೊಂಡು ನಡೆದು ಹೋಗುತ್ತಿದ್ದು, ಬಾಲಕಿಯ ಅಸಹಾಯಕತೆ ಕರುಳು ಹಿಂಡುತ್ತಿದೆ. ಕಾರು ಡಿಕ್ಕಿಯಾಗಿ ತನ್ನ ತಂಗಿಯ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆ ಟ್ರೀಟ್ ಮೆಂಟ್ ಗೆ ಕರೆದೊಯ್ಯುತ್ತಿರೋದಾಗಿ ಬಾಲಕಿ ಹೇಳಿದ್ದಾಳೆ.

ಗಾಜಾ ನಗರದ ರಸ್ತೆಯಲ್ಲಿ ಬಾಲಕಿ ನಡೆದುಕೊಂಡು ಹೋಗುವಾಗ ಸಂದರ್ಶಕರ ಕೈಗೆ ಬಾಲಕಿ ಸಿಕ್ಕಿದ್ದಾಳೆ. ತಂಗಿಯನ್ನು ಹೊತ್ತು ಸಾಗಿಸಲು ನಿನಗೆ ಆಯಾಸವಾಗುತ್ತಿಲ್ಲವೇ ಎಂಬ ಪ್ರಶ್ನೆಗೆ, ಬಹಳ ಸುಸ್ತಾಗುತ್ತಿದೆ. ಆದರೆ ಅವಳು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಹೊತ್ತೊಯ್ಯುತ್ತಿದ್ದೇನೆ ಎಂದು ಬಾಲಕಿ ಉತ್ತರಿಸಿದ್ದಾಳೆ.

ಅನಂತರ ಸಂದರ್ಶಕರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಡ್ರಾಪ್ ಮಾಡಿದ್ದಾರೆ. ತನ್ನ ಪ್ರೀತಿಯ ತಂಗಿಗೋಸ್ಕರ ಅಕ್ಕ ಈ ಪರಿ ನಡೆದುಕೊಂಡು ಕಷ್ಟ ಪಡುವ ದೃಶ್ಯದ ವಿಡಿಯೋ ವೈರಲ್ ಆಗಿದೆ. ವಿಶ್ವ ಸಂಸ್ಥೆ ಮಧ್ಯ ಪ್ರವೇಶಿಸಿ ಇಸ್ರೇಲಿ ಸೇನೆ ಅಕ್ರಮಣಕ್ಕೆ ಕಡಿವಾಣ ಹೇರುವಂತೆ ಒತ್ತಾಯವೂ ಹೆಚ್ಚಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version