ಮಾಲೀಕನನ್ನು ಉಳಿಸಲು ಹುಲಿಯೊಂದಿಗೆ ಹೋರಾಡಿದ ಜರ್ಮನ್ ಶೆಫರ್ಡ್ ನಾಯಿ ಸಾವು - Mahanayaka

ಮಾಲೀಕನನ್ನು ಉಳಿಸಲು ಹುಲಿಯೊಂದಿಗೆ ಹೋರಾಡಿದ ಜರ್ಮನ್ ಶೆಫರ್ಡ್ ನಾಯಿ ಸಾವು

02/03/2025

ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಸಾಕು ಜರ್ಮನ್ ಶೆಫರ್ಡ್ ನಾಯಿಯು ತನ್ನ ಮಾಲೀಕನನ್ನು ರಕ್ಷಿಸಲು ಹುಲಿಯೊಂದಿಗೆ ಹೋರಾಡಿ ಕೊನೆಗೆ ಸಾವನ್ನಪ್ಪಿದೆ. ಈ ಘಟನೆ ಫೆಬ್ರವರಿ 26 ರಂದು ಬಾಂಧವಗಡ್ ಹುಲಿ ಮೀಸಲು ಪ್ರದೇಶದ ಬಳಿ ನಡೆದಿದೆ.

ಮಾಲೀಕ ಶಿವಂ ಬಡ್ಗಾಯಾ ಎಂಬುವವರು ತನ್ನ ಸಾಕು ಜರ್ಮನ್ ಶೆಫರ್ಡ್ ನೊಂದಿಗೆ ತನ್ನ ಮನೆಯ ಹೊರಗೆ ಇದ್ದಾಗ ಹುಲಿಯೊಂದು ಹತ್ತಿರದ ಕಾಡಿನಿಂದ ಹಳ್ಳಿಗೆ ದಾರಿತಪ್ಪಿ ಬಂದಿತ್ತು. ಹುಲಿ ಶಿವಂ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು.ಆದರೆ ಅವನ ಸಾಕು ನಾಯಿ ಹುಲಿಯನ್ನು ಎದುರಿಸಿ ಜೋರಾಗಿ ಬೊಗಳಲು ಪ್ರಾರಂಭಿಸಿತು.
ಹುಲಿ ಆರಂಭದಲ್ಲಿ ನಾಯಿಯ ಬೊಗಳುವಿಕೆಯನ್ನು ನಿರ್ಲಕ್ಷಿಸಿತು. ಅಲ್ಲದೇ ಮಾಲೀಕನ ಮೇಲಿನ ತನ್ನ ಗಮನವನ್ನು ಬೇರೆಡೆಗೆ ತಿರುಗಿಸಿ ನಾಯಿಯ ಮೇಲೆ ದಾಳಿ ಮಾಡಿತು.

ಹುಲಿಯು ಜರ್ಮನ್ ಶೆಫರ್ಡ್ ಅನ್ನು ತನ್ನ ದವಡೆಗಳಲ್ಲಿ ಹಿಡಿದು ಗ್ರಾಮದ ಹೊರಗೆ ತೆಗೆದುಕೊಂಡು ಹೋಯಿತು ಎಂದು ಶಿವಂ ಭಯಾನಕ ಘಟನೆಯನ್ನು ವಿವರಿಸಿದರು. ಇದೇ ವೇಳೆ ಸಾಕುಪ್ರಾಣಿ ತೀವ್ರವಾಗಿ ಪ್ರತಿರೋಧಿಸಿ ಪ್ರತಿಯಾಗಿ ಹೋರಾಡಿದಾಗ ಹುಲಿ ಕೊನೆಗೂ ಕಾಡಿಗೆ ಮರಳಿತು. ಕೂಡಲೇ ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಆದರೆ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಗಾಯಗಳಿಂದಾಗಿ ಅದು ಸಾವನ್ನಪ್ಪಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ