ನಿಮ್ಮ ವ್ಯಾಪಾರಕ್ಕೆ ಸಾಲ ಪಡೆಯುವುದು ಈಗ ಸುಲಭ | ಶೇ.7ರಷ್ಟು ಸಬ್ಸಿಡಿಯೂ ಸಿಗಲಿದೆ

31/10/2020

ನವದೆಹಲಿ:  ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ವಿತರಿಸುವ ಕಾರ್ಯವನ್ನು ತ್ವರಿತಗೊಳಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಂಡಿದೆ.


 ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ವಿವಿಧ ಬ್ಯಾಂಕುಗಳ ಜೊತೆಗೆ ಸ್ವನಿಧಿ ಯೋಜನೆಯ ಪೋರ್ಟಲ್ ಅನ್ನು ಸಂಯೋಜಿಸಲಾಗಿದೆ. ಇದಕ್ಕೆ ಅನುಕೂಲವಾಗುವಂತೆ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ.


ಸ್ವನಿಧಿ ಯೋಜನೆಯಡಿ ಸಾಲ ವಿತರಣೆ ವಿಳಂಬವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.  ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಬಳಸುವ ಮೂಲಕ ಶೀಘ್ರವಾಗಿ ಸಾಲ ಮಂಜೂರು ಮಾಡಲು ಉದ್ದೇಶಿಸಲಾಗಿದೆ.


 ಬೀದಿ ಬದಿ ವ್ಯಾಪಾರಸ್ಥರಿಗೆ ತಲಾ 10 ಸಾವಿರ ರೂಪಾಯಿ ನೀಡಲಿದ್ದು 10 ಕಂತುಗಳಲ್ಲಿ ವ್ಯಾಪಾರಿಗಳು ಮರು ಪಾವತಿಸಬೇಕು. ನೀವು ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಮಾಡಿದರೆ ಶೇ. 7ರಷ್ಟು ಸಬ್ಸಿಡಿ ನಿಮ್ಮದಾಗಲಿದೆ.


ಇತ್ತೀಚಿನ ಸುದ್ದಿ

Exit mobile version