ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಗಿಡುಗನನ್ನು ರಕ್ಷಿಸಲು ಯತ್ನಿಸಿದವರಿಗೆ ಕಾರು ಡಿಕ್ಕಿ: ಇಬ್ಬರು ಸಾವು
ಮುಂಬೈ: ರಸ್ತೆಯಲ್ಲಿ ಗಾಯಗೊಂಡಿದ್ದ ಗಿಡುಗನನ್ನು ರಕ್ಷಿಸಲು ಯತ್ನಿಸಿದ ಇಬ್ಬರು ವ್ಯಕ್ತಿಗಳು ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ದಾರುಣ ಘಟನೆ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಮೇಲೆ ನಡೆದಿದೆ.
43 ವರ್ಷದ ‘ಅಮರ್ ಮನೀಶ್ ಜಾರಿವಾಲಾ’ ಮೃತ ವ್ಯಕ್ತಿಯಾಗಿದ್ದು, ಇವರು ಬಾಂದ್ರಾ-ವರ್ಲಿ ರಸ್ತೆ ಮೂಲಕ ಮಲಾಡ್ ಗೆ ಹೋಗುತ್ತಿದ್ದ ವೇಳೆ ರಸ್ತೆ ಮೇಲೆ ಗಾಯಗೊಂಡು ಬಿದ್ದಿದ್ದ ಗಿಡುಗನನ್ನು ನೋಡಿದ್ದು, ಈ ವೇಳೆ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಬಳಿಕ ಗಿಡುಗನನ್ನು ರಕ್ಷಿಸಲು ಮುಂದಾಗುತ್ತಿದ್ದ ವೇಳೆಯೇ ವೇಗವಾಗಿ ಬಂದ ಕಾರು ಚಾಲಕ ಹಾಗೂ ಮನೀಶ್ ಜಾರಿವಾಲಾ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೇ 30ರಂದು ಈ ಘಟನೆ ನಡೆದಿದ್ದು, ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಟಾಕ್ಸಿ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನ ಹೀನಾಯ ಸೋಲು: ‘ಚಿಂತಿಸಿ ಫಲವಿಲ್ಲ’ ಎಂದ ಡಿ.ಕೆ.ಶಿವಕುಮಾರ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕತ್ತೆ ಸಾಕಣಿಕೆ ಕೇಂದ್ರ ಸ್ಥಾಪಿಸಿದ ರಾಮನಗರದ ಶ್ರೀನಿವಾಸ್ ಗೌಡ
ನಮ್ಮ ಮೆಟ್ರೋದಲ್ಲಿ ಇನ್ನು ಮುಂದೆ ತಮಿಳುನಾಡಿಗೂ ಪ್ರಯಾಣಿಸಬಹುದು!
ಆಂಬುಲೆನ್ಸ್ ಸಿಗಲಿಲ್ಲ: ಮಗಳ ಮೃತದೇಹ ಹೆಗಲಲ್ಲಿ ಹೊತ್ತು ನಡೆದ ತಂದೆ!
ಪ್ರವಾದಿ ವಿರುದ್ಧ ಹೇಳಿಕೆ ವಿರುದ್ಧ ಸಿಡಿದೆದ್ದ ಮುಸ್ಲಿಮರ ಪ್ರತಿಭಟನೆ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?