ಹಿರಿಯ ನಾಗರಿಕರ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯದ್ ಅಜ್ಮಲ್ ರವರಿಗೆ ಸನ್ಮಾನ - Mahanayaka

ಹಿರಿಯ ನಾಗರಿಕರ ವೇದಿಕೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯದ್ ಅಜ್ಮಲ್ ರವರಿಗೆ ಸನ್ಮಾನ

hiriya nagarikara vedike
04/11/2022

ಶಿರೂರು: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಘಟಕದ ಕೋಶಾಧಿಕಾರಿ ಜನಾಬ್ ಸಯ್ಯದ್ ಅಜ್ಮಲ್ ರವರು ಹಿರಿಯ ನಾಗರಿಕರ ವೇದಿಕೆ ಶಿರೂರಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ನಮ್ಮ ನಾಡ ಒಕ್ಕೂಟ ಬೈಂದೂರು ವತಿಯಿಂದ ಸನ್ಮಾನಿಸಲಾಯಿತು.

ದಿನಾಂಕ 31 ಅಕ್ಟೋಬರ್ ಸೋಮವಾರದಂದು ಸನ್ಮಾನ ಕಾರ್ಯಕ್ರಮವು ಶಿರೂರಿನ ಎ-ವನ್ ಸೂಪರ್ ಮಾರ್ಕೆಟ್ ನಲ್ಲಿ ಬೈಂದೂರು ತಾಲೂಕು ಘಟಕದ ವತಿಯಿಂದ ನಡೆಯಿತು.

ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌ.ಝಮೀರ್ ಅಹ್ಮದ್ ರಶಾದಿ, ಜಿಲ್ಲಾ ಸಮಿತಿ ಸದಸ್ಯರಾದ ಪರಿ ಹುಸೇನ್, ಪೀರು ಸಾಹೇಬ್ ಆದಿಉಡುಪಿ, ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ, ಉಪಾಧ್ಯಕ್ಷರಾದ ಮಮ್ದು ಇಬ್ರಾಹಿಮ್, ಕಚ್ಚಿ ಮುಶ್ತಾಕ್, ಎಚ್.ಎಸ್. ಸಿದ್ದೀಕ್, ಇಲ್ಯಾಸ್ ಬೈಂದೂರು, ಮಣಿಗಾರ್ ಜಿಫ್ರಿ, ಮಣೆಗಾರ್ ಮನ್ಸೂರ್ ಕರಾಣಿ ಮುಹಿಯ್ಯುದ್ದೀನ್ ಸಾಹೇಬ್, ತಾಲೂಕು ಘಟಕದ ಸದಸ್ಯರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ