ಆಲೋವೆರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿದ ಬಾಲಕಿ ಸಾವು: ಪೋಷಕರ ಬೇಜವಾಬ್ದಾರಿ

ಬೆಂಗಳೂರು: ಆಲೋವೆರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ನಡೆದಿದೆ.
9ನೇ ತರಗತಿಯ ವಿದ್ಯಾರ್ಥಿನಿ ನಿಧಿ ಕೃಷ್ಣ(14) ಮೃತಪಟ್ಟ ಬಾಲಕಿಯಾಗಿದ್ದಾಳೆ.
ಬಾಲಕಿ ಪ್ರತಿನಿತ್ಯ ಆಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದ್ರೆ ಆಕೆಯ ಮನೆಯವರು ಆಲೋವೆರಾ ಡಬ್ಬದಲ್ಲಿ ಗಿಡಗಳಿಗೆ ಬಳಸುವ ಹರ್ಬಿಸೈಡ್ ಔಷಧಿಯನ್ನು ತುಂಬಿಸಿಟ್ಟಿದ್ದರು. ಇದನ್ನು ಅರಿಯದ ಬಾಲಕಿ ಆಲೋವೆರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿದ್ದಾಳೆ.
ಮಾರ್ಚ್ 18ರಂದು ಬಾಲಕಿ ಕ್ರಿಮಿನಾಶಕ ಸೇವಿಸಿದ್ದಳು. ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾರ್ಚ್ 31ರಂದು ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದಾಳೆ.
ಪೋಷಕರ ನಿರ್ಲಕ್ಷ್ಯದಿಂದಾಗಿ ಬಾಲಕಿ ಸಾವನ್ನಪ್ಪಿದ್ದು, ಆಲೋವೆರಾ ಡಬ್ಬದಲ್ಲಿ ಕ್ರಿಮಿನಾಶಕ ತುಂಬಿಸಿಟ್ಟಿರುವುದೇ ಬಾಲಕಿಯ ಸಾವಿಗೆ ಕಾರಣವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7