ಭಾರತೀಯ ಶೈಲಿಯಲ್ಲಿ ಪತ್ನಿಯ ಸೀಮಂತ ಮಾಡಿದ ಆರ್ ಸಿಬಿ ತಂಡದ ಸ್ಟಾರ್ ಆಲ್ ರೌಂಡರ್
ಆರ್ ಸಿಬಿ ತಂಡದ ಸ್ಟಾರ್ ಆಲ್ ರೌಂಡರ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಪತ್ನಿ ವಿನಿ ರಾಮನ್ ಅವರ ಸೀಮಂತ ಭಾರತೀಯ ಶೈಲಿಯಲ್ಲಿ ನಡೆಯಿತು. ಈ ಸಮಾರಂಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದು ಬಹಳ ವೈರಲ್ ಆಗುತ್ತಿದೆ.
ಅಂದಹಾಗೇ ಇ ಸಮಾರಂಭದಲ್ಲಿ ವಿನಿ ಭಾರತೀಯ ಶೈಲಿಯಂತೆ ನೀಲಿ ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ಹಣೆಗೆ ಬೊಟ್ಟು ಇಟ್ಟು ಕಂಗೊಳಿಸಿದರು. ಹಿರಿಯ ಸಂಬಂಧಿಕರು ಆರತಿ ಎತ್ತಿ ಗರ್ಭಿಣಿ ವಿನಿಗೆ ಆರ್ಶೀರ್ವಾದ ಮಾಡಿದರು.
ತಮಿಳುನಾಡು ಮೂಲದ ವಿನಿ ರಾಮನ್ ಅವರನ್ನು ಮ್ಯಾಕ್ಸ್ ವೆಲ್ 2022ರ ಮಾರ್ಚ್ 27ರಂದು ವಿವಾಹವಾಗಿದ್ದರು. ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಇವರ ವಿವಾಹ ಸಮಾರಂಭ ಜರಗಿತ್ತು. ಸೆಪ್ಟಂಬರ್ ನಲ್ಲಿ ಮಗು ಜನಿಸುವ ನಿರೀಕ್ಷೆ ಇದೆ.
2023ರ ಸೆಪ್ಟಂಬರ್ ನಲ್ಲಿ ಒಂದು ಕಾಮನಬಿಲ್ಲು ನಮ್ಮ ಬದುಕಿನಲ್ಲಿ ಬರಲಿದೆ ಎಂದು ಘೋಷಿಸಲು ನಾನು ಮತ್ತು ಮ್ಯಾಕ್ಸ್ ವೆಲ್ ಭಾವುಕರಾಗಿದ್ದೇವೆ ಎಂದು ಮೇಯಲ್ಲಿ ವಿನಿ ಬರೆದುಕೊಂಡಿದ್ದರು.
29 ವರ್ಷದ ವಿನಿ ರಾಮನ್ ಮೆಲ್ಬೋರ್ನ್ ನಲ್ಲಿ ಜನಿಸಿದರು. ಅವರು ವೈದ್ಯಕೀಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಮ್ಯಾಕ್ಸ್ ವೆಲ್ ಸದ್ಯ ಟಿ-20 ಬ್ಲಾಸ್ಟ್ 2023 ಮುಗಿಸಿ ವಿಶ್ರಾಂತಿಯಲ್ಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw