ಜ್ಞಾನವಾಪಿ ಮಸೀದಿಯೂ ಅಲ್ಲ, ದೇವಾಲಯವೂ ಅಲ್ಲ, ಅದೊಂದು ಬೌದ್ಧ ವಿಹಾರ: ಸುಮಿತ್ ರತನ್ ಭಂತೆ ಹೇಳಿಕೆ - Mahanayaka

ಜ್ಞಾನವಾಪಿ ಮಸೀದಿಯೂ ಅಲ್ಲ, ದೇವಾಲಯವೂ ಅಲ್ಲ, ಅದೊಂದು ಬೌದ್ಧ ವಿಹಾರ: ಸುಮಿತ್ ರತನ್ ಭಂತೆ ಹೇಳಿಕೆ

gyanvapi
03/08/2023

ಜ್ಞಾನವಾಪಿ ಮಸೀದಿ ವಿವಾದಕ್ಕೆ ಇದೀಗ ಹೊಸ ತಿರುವು ಲಭ್ಯವಾಗಿದ್ದು, ಬೌದ್ಧ ಧರ್ಮ ಗುರುವೊಬ್ಬರು, ಜ್ಞಾನವಾಪಿ ಮಸೀದಿಯೂ ಅಲ್ಲ, ದೇಗುಲವೂ ಅಲ್ಲ, ಅದೊಂದು ಬೌದ್ಧ ವಿಹಾರ ಎಂದು ಹೇಳಿಕೆ ನೀಡಿದ್ದಾರೆ.


Provided by

ಈ ಬಗ್ಗೆ ಸುಪ್ರೀಂಕೋರ್ಟ್​​​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ ಬೌದ್ಧ ಗುರು ಸುಮಿತ್ ರತನ್ ಭಂತೆ, ಜ್ಞಾನವಾಪಿಯಲ್ಲಿ  ಬೌದ್ಧ ಕುರುಹುಗಳ ಬಗ್ಗೆ  ಪುರಾವೆಗಳನ್ನು ನೋಡಲು ಪ್ರತ್ಯೇಕ ಸಮೀಕ್ಷೆ ನಡೆಸಲು ಒತ್ತಾಯಿಸಿದ್ದಾರೆ.

ಬೌದ್ಧ ವಿಹಾರಗಳು ದೇಶಾದ್ಯಂತ ಇವೆ. ವಿಹಾರಗಳನ್ನು ಕೆಡವಿ ದೇವಾಲಯಗಳನ್ನು ಕಟ್ಟಲಾಗಿದೆ. ಜ್ಞಾನವಾಪಿಯಲ್ಲಿ ಕಂಡುಬರುವ ತ್ರಿಶೂಲ ಮತ್ತು ಸ್ವಸ್ತಿಕ್ ಚಿಹ್ನೆಗಳು ಬೌದ್ಧ ಧರ್ಮಕ್ಕೆ ಸೇರಿವೆ. ಜ್ಞಾನವಾಪಿ ಅಥವಾ ಕೇದಾರನಾಥದಲ್ಲಿ ಜ್ಯೋತಿರ್ಲಿಂಗಗಳೆಂದು ವರ್ಣಿಸಲಾಗುತ್ತಿರುವ ಚಿಹ್ನೆಗಳು ವಾಸ್ತವವಾಗಿ ಬುದ್ಧ ಸ್ತೂಪಗಳಾಗಿವೆ ಎಂದು ಅವರು ವಾದಿಸಿದ್ದಾರೆ.


Provided by

ಇಸ್ಲಾಂ 1500 ವರ್ಷಗಳ ಹಿಂದೆ ಮತ್ತು ಹಿಂದೂ ಧರ್ಮ 1200 ವರ್ಷಗಳ ಹಿಂದೆ ಬಂದಿತು. ಆದರೆ ಬೌದ್ಧಧರ್ಮವು 2500 ವರ್ಷಗಳಷ್ಟು ಹಳೆಯದ್ದಾಗಿದೆ. ದೇವಾಲಯಗಳನ್ನು ನಿರ್ಮಿಸಲು ಜೈನ ಹಾಗೂ ಬೌದ್ಧ ವಿಹಾರಗಳನ್ನು ದೇಶದಲ್ಲಿ ಕೆಡವಲಾಗಿದೆ ಎಂದು ಅವರು ವಾದಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ