ಗೋ ಬ್ಯಾಕ್ ಆರ್.ಅಶೋಕ್: ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚಿದ ಆಕ್ರೋಶ
ಮಂಡ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಆರ್.ಅಶೋಕ್ ಹಾಗೂ ಮಂಡ್ಯ ಜಿಲ್ಲಾ ಕಾರ್ಯಕರ್ತರ ನಡುವೆ ಮುನಿಸು ಆರಂಭವಾಗಿದ್ದು, ಬೆಂಗಳೂರು—ಮೈಸೂರು ಹೆದ್ದಾರಿಯ ಫ್ಲೈಓವರ್ ಮತ್ತು ವಿವಿಧೆಡೆಗಳಲ್ಲಿ ಗೋ ಬ್ಯಾಕ್ ಆರ್.ಅಶೋಕ್ ಎಂದು ಬರೆಯಲಾಗಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ಅವರನ್ನು ನೇಮಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಆರ್.ಅಶೋಕ್ ಮಂಡ್ಯದಲ್ಲಿ ಖಂಡಿತವಾಗಿಯೂ ಜನಪ್ರಿಯ ನಾಯಕರಲ್ಲ, ಹಳೆ ಮೈಸೂರು ಭಾಗದವರಿಗೆ ಉಸ್ತುವಾರಿ ನೀಡಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಆರ್.ಅಶೋಕ್ ಅವರನ್ನು ಸ್ವೀಕರಿಸಲು ಜನರು ನಿರಾಕರಿಸಿದ್ದು, ಜಿಲ್ಲೆಗೆ ಸಂಬಂಧವೇ ಇಲ್ಲದವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ, ಅವರನ್ನು ತಕ್ಷಣವೇ ಬದಲಿಸಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw