ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ
ಮೂಡುಬಿದಿರೆ: ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ. ಇದೊಂದು ವ್ಯಾಪಾರ, ಈ ವ್ಯಾಪಾರದಲ್ಲಿ ಎಲ್ಲರೂ ಇದ್ದಾರೆ. ಗೋಮಾತೆ ಪ್ರೀತಿ ಇದ್ರೆ ಮೊದಲು ಗೋ ರಕ್ಷಣೆ ಮಾಡಿ. ನಮ್ಮ ನಾಡ ತಳಿಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಿ. ಗೋವುಗಳನ್ನು ಸಾಕುವ ಮೂಲಕ ಗೋವಿನ ಪ್ರೀತಿ ತೋರಿಸಿ ಎಂದು ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದ್ದಾರೆ.
ಮೂಡುಬಿದಿರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮನೆಯಲ್ಲಿ ಬೇರೆ ಬೇರೆ ತಳಿಯ ೫೦ ಗೋವುಗಳಿವೆ. ಗೋವು ಸಾಕುವ ಆಸಕ್ತಿಯಿರುವವರಿಗೆ ಗೋವು ಕೊಟ್ಟಿದ್ದೇವೆ. ಕಡಬದ ಗೋಸಾಗಾಟವನ್ನು ಕಾಂಗ್ರೆಸ್ ಕಾರ್ಯಕರ್ತರೇ ಹಿಡಿದಿದ್ದಾರೆ. ಕಡಬದ ಪ್ರಕರಣದಲ್ಲಿ ಸಾಗಾಟ ಮಾಡುತ್ತಿದ್ದದ್ದೆ ಬಿಜೆಪಿಯವರು ಎಂದು ಅವರು ಹೇಳಿದರು.
ಗೋವುಗಳ ಸಂರಕ್ಷಣೆಗೆ ಒಂದು ಕಾನೂನು ತನ್ನಿ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಕಾನೂನು ತರಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಉತ್ತರ ಪ್ರದೇಶದಲ್ಲಿ ಬೀಫ್ ಎಕ್ಸ್ ಪೋರ್ಟ್ ಕಾರ್ಖಾನೆಗಳು ಬಿಜೆಪಿಯವರದ್ದೇ ಆಗಿದೆ. ಬಿಜೆಪಿಯ ಸಂಸದರದ್ದೇ ಬೀಫ್ ಎಕ್ಸ್‌ಪೋರ್ಟ್ ಕಾರ್ಖಾನೆಗಳಿವೆ ಎಂದು ಮಿಥುನ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಕೃಷ್ಣ ಬೆಣ್ಣೆ ಕದ್ದರೆ ತುಂಟಾಟ, ಈ ಬಾಲಕ ಹಸಿವಿನಿಂದ ತಿಂಡಿ ಕದ್ದರೆ ಅಪರಾಧವೇ? | ನ್ಯಾಯಾಧೀಶರ ಪ್ರಶ್ನೆ
ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: ತರಕಾರಿ ತರಲು ಹೋದ ಬಾಲಕಿಯ ಮೇಲೆ ಅತ್ಯಾಚಾರ
ಮೊಬೈಲ್ ಟವರ್ ಗೆ ಹತ್ತಿಕೊಂಡ ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
ಸದಾ ಹಿಂಸಿಸುವ ಮೈಕೈ ನೋವಿಗೆ ಶಾಶ್ವತ ಪರಿಹಾರ ಏನು?
ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ
ಮನಮೋಹನ್ ಸಿಂಗ್ ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿದ್ದರು | ಮೋದಿ ಫೋಟೋಗೆ ಕಾಂಗ್ರೆಸ್ ತಿರುಗೇಟು