ಶಾಲೆಗೆ ಗೋಮಾಂಸದ ಪದಾರ್ಥ ತಂದಿದ್ದಕ್ಕೆ ಮುಖ್ಯೋಪಾಧ್ಯಾಯಿನಿ ಅರೆಸ್ಟ್!
ಅಸ್ಸಾಂ: ಶಾಲೆಗೆ ಗೋಮಾಂಸದ ಪದಾರ್ಥ ತಂದಿದ್ದಾರೆ ಎಂದು ಆರೋಪಿಸಿ ಅಸ್ಸಾಂನ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ಮೇ 11 ರಿಂದ ಮೇ 14 ರ ನಡುವೆ ರಾಜ್ಯದ ಶಾಲೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ‘ಗುಣೋತ್ಸವ 2022’ ಸಮಯದಲ್ಲಿ ಮುಖ್ಯೋಪಾಧ್ಯಾಯನಿ ಗೋಮಾಂಸದ ಪದಾರ್ಥ ಶಾಲೆಗೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.
ಮಧ್ಯಾಹ್ನದ ಊಟಕ್ಕೆ ಗೋಮಾಂಸದ ಕರಿ ಕೊಂಡೊಯ್ದಿದ್ದಕ್ಕೆ ಇದೀಗ ಮುಖ್ಯೋಪಾಧ್ಯಾಯನಿ ವಿರುದ್ಧ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದ ಆರೋಪವನ್ನು ಹೊರಿಸಿ ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಘಟನೆಯ ಬಗ್ಗೆ ವಿವರಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೃಣಾಲ್ ದೇಕಾ, ನಾವು ಅವರನ್ನು ಮೇ 16 ರಂದು ಪೊಲೀಸ್ ಠಾಣೆಗೆ ಕರೆತಂದಿದ್ದೇವೆ. ವಿಚಾರಣೆಯ ನಂತರ ಅವರನ್ನು ಬಂಧಿಸಲಾಯಿತು ಮತ್ತು ನ್ಯಾಯಾಲಯವು ಮರುದಿನ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು ಎಂದು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಗೋಮಾಂಸ ಸೇವನೆ ಕಾನೂನು ಬಾಹಿರವಲ್ಲ. ಆದರೂ ಮುಖ್ಯೋಪಾಧ್ಯಾಯನಿಯನ್ನು ಬಂಧಿಸಿರುವುದು ತೀವ್ರ ಆಕ್ರೋಶಕ್ಕೆ ಕೂಡ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗಾಂಧಿ ಕಥನದ ಲೇಖಕ ಡಿ.ಎಸ್.ನಾಗಭೂಷಣ ಇನ್ನಿಲ್ಲ
ಕೊಚ್ಚಿ ಮೆಟ್ರೋ ಇನ್ನು ಮುಂದೆ ಮದುವೆ ಫೋಟೋಶೂಟ್ ಗೆ ಲಭ್ಯ!