ಆನ್ ಲೈನ್ ಕ್ಲಾಸ್ ಗೆ ನೆಟ್ ವರ್ಕ್ ಇಲ್ಲ: ಗುಡ್ಡದಲ್ಲಿ ಟೆಂಟ್ ಹಾಕಿ ಕುಳಿತ ಹೆಣ್ಣು ಮಕ್ಕಳು! - Mahanayaka

ಆನ್ ಲೈನ್ ಕ್ಲಾಸ್ ಗೆ ನೆಟ್ ವರ್ಕ್ ಇಲ್ಲ: ಗುಡ್ಡದಲ್ಲಿ ಟೆಂಟ್ ಹಾಕಿ ಕುಳಿತ ಹೆಣ್ಣು ಮಕ್ಕಳು!

indian online classes
07/08/2021

ಪಣಜಿ: ಕೊವಿಡ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಆದರೆ, ಇಡೀ ದೇಶದಲ್ಲಿಯೇ ನೆಟ್ ವರ್ಕ್ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಇದೇ ಸಂದರ್ಭದಲ್ಲಿ ಗೋವಾದ ಹೆಣ್ಣು ಮಕ್ಕಳು ನೆಟ್ ವರ್ಕ್ ಸಮಸ್ಯೆಯಿಂದಾಗಿ ಗುಡ್ಡದಲ್ಲಿ ಟೆಂಟ್ ಹಾಕಿ ಕಲಿಯುವಂತಾಗಿದೆ.

ಗೋವಾದ ವಾಳಪೈ, ಸಾಂಗೆ, ಸಾವರ್ಡೆ, ನೇತ್ರಾವಳಿ ಮೊದಲಾದ ಭಾಗಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆಗಳು ಕಾಣಿಸಿಕೊಂಡಿದೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎತ್ತರದ ಗುಡ್ಡಗಳಲ್ಲಿ ಕುಳಿತು ಆನ್ ಲೈನ್ ಕ್ಲಾಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಆಗಿದ್ದರೂ, ವಿದ್ಯಾಭ್ಯಾಸದ ಹಸಿವಿರುವವರಿಗೆ ಇದು ಅನಿವಾರ್ಯವಾಗಿದೆ.

ಕೊರೊನಾ ಎರಡನೇ ಅಲೆ ಮುಕ್ತಾಯವಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಮೂರನೇ ಅಲೆ ಭೀತಿ ಎದುರಾಗಿದೆ. ಇದೇ ಸಂದರ್ಭದಲ್ಲಿ ಆನ್ ಲೈನ್ ಕ್ಲಾಸ್ ಅನಿವಾರ್ಯವಾಗಿದೆ. ದೊಡ್ಡ ದೊಡ್ಡ ಆಫರ್ ಗಳನ್ನು ನೀಡುವ ಟೆಲಿಕಾಂ ಕಂಪೆನಿಗಳು, ನೆಟ್ಟಗೆ ನೆಟ್ ವರ್ಕ್ ವ್ಯವಸ್ಥೆ ಮಾಡಲು ಜಿಪುಣತನ ತೋರಿಸುತ್ತಿವೆ.

ಈ ಬಗ್ಗೆ ಗಮನ ಹರಿಸಲು ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ನೂರಾರು ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಇದೀಗ ಸೀತೆ ಅಶೋಕ ವನದಲ್ಲಿ ಕುಳ್ಳಿರಿಸಿದಂತೆ, ದೇಶದ ಹೆಣ್ಣು ಮಕ್ಕಳನ್ನು ಟೆಂಟ್ ಹಾಕಿ ಅರಣ್ಯದಲ್ಲಿ ಕೂರಿಸುವ ಮಟ್ಟಕ್ಕೆ ನೆಟ್ ವರ್ಕ್ ಸಮಸ್ಯೆಗಳು ದೇಶದಲ್ಲಿ ತಲೆದೋರಿವೆ.

ಇತ್ತೀಚಿನ ಸುದ್ದಿ