ನಿಶ್ಚಿತಾರ್ಥದ ಬಳಿಕ ಗೋವಾಕ್ಕೆ ಕರೆದೊಯ್ದಾತ ಹೇಳಿದಂತೆ ಕೇಳು ಎಂದ | ವಧು ನಿರಾಕರಿಸಿದಕ್ಕೆ ಆತ ಮಾಡಿದ್ದೇನು ಗೊತ್ತಾ?
ಹಾಸನ: ಅದ್ದೂರಿ ನಿಶ್ಚಿತಾರ್ಥದ ಬಳಿಕ ಮದುವೆಗೆ ಇನ್ನು 2 ತಿಂಗಳು ಇರುವಾಗಲೇ ವರನೋರ್ವ ತನಗೆ ಈ ಮದುವೆ ಬೇಡ ಎಂದು ಹೇಳಿದ್ದು, ಇದರಿಂದಾಗಿ ಇದೀಗ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹಾಸನ ಬೇಲೂರು ಗ್ರಾಮದ ನಿವಾಸಿ ವಧು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದ ವರ ನಿಶ್ಚಿತ್ ಗೆ ಫೆ.14ರಂದು ನಿಶ್ಚಿತಾರ್ಥ ನೆರವೇರಿದೆ. ಮೇ 9ರಂದು ಮದುವೆ ನೆರವೇರಬೇಕಿತ್ತು. ಇದಕ್ಕಾಗಿ ಕಲ್ಯಾಣ ಮಂಟಪ ಕೂಡ ಕಾಯ್ದಿರಿಸಲಾಗಿತ್ತು.
ವರನ ಕುಟುಂಬಸ್ಥರು ಹೇಳಿದಂತೆಯೇ ವಧುವಿನ ಕುಟುಂಬಸ್ಥರು ಮದುವೆಗಾಗಿ ಅದ್ದೂರಿ ಸಿದ್ಧತೆ ನಡೆಸಿದ್ದರು. ಆದರೆ ವರ ಇದೀಗ ತನಗೆ ಮದುವೆ ಬೇಡ ಎಂದು ಹೇಳುತ್ತಿದ್ದಾನೆ. ಈ ವಿಚಾರಕ್ಕೆ ಸಂಬಂಧಿದಂತೆ ವಧು ಆತ್ಮಹತ್ಯೆಗೂ ಯತ್ನಿಸಿದ್ದಾಳೆ.
ಈ ಸಂಬಂಧ ಹಾಸನ ಎಸ್ಪಿ ಕಚೇರಿಗೆ ವಧುವಿನ ಕಡೆಯವರು ದೂರು ನೀಡಿದ್ದಾರೆ. ಇನ್ನೂ ಮದುವೆಗೂ ಮುಂದೆ ವರ ನಿಶ್ಚಿತ್ ತನ್ನನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದ.ಅಲ್ಲಿ ತಾನು ಹೇಳಿದಂತೆ ಕೇಳಬೇಕು ಎಂದು ಒತ್ತಾಯಿಸಿದ್ದಾನೆ. ಆದರೆ ನಾನು ಒಪ್ಪಲಿಲ್ಲ. ಈ ಕಾರಣಕ್ಕೆ ಆತ ನನ್ನ ಮೇಲೆ ಆಕ್ರೋಶಗೊಂಡಿದ್ದ. ಇದಾದ ಮೇಲೆ ನಿಶ್ಚಿತ್ ತಾಯಿ ನನ್ನ ವ್ಯಕ್ತಿತ್ವ ಸರಿಯಿಲ್ಲ ಎಂಬ ಕುಂಟು ನೆಪ ಹೇಳಿ ಈ ಮದುವೆ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಧು ಆರೋಪಿದ್ದಾಳೆ. ನಾನು ನಿಶ್ಚಿತ್ ನನ್ನೇ ಮದುವೆಯಾಗುವುದು. ಯಾಕೆಂದರೆ ಇದು ನನ್ನ ಮರ್ಯಾದೆಯ ಪ್ರಶ್ನೆಯಾಗಿದೆ. ಒಂದು ವೇಳೆ ಈ ಮದುವೆಗೆ ಒಪ್ಪದಿದ್ದರೆ ನಾನು ಸಾಯುತ್ತೇನೆ ಎಂದು ವಧು ಹೇಳಿದ್ದಾಳೆ.