ಮನೆಯ ದೇವರ ಕೋಣೆಯಲ್ಲಿಯೇ ಸಾವಿಗೆ ಶರಣಾದ ಯುವಕ

08/09/2023
ಕಾರ್ಕಳ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮನೆಯ ದೇವರ ಕೋಣೆಯಲ್ಲಿಯೇ ಸಾವಿಗೆ ಶರಣಾಗಿರುವ ಘಟನೆ ಸೆ.7ರಂದು ಬೆಳಗ್ಗೆ ಮಿಯ್ಯೆರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಜೋಡುಕಟ್ಟೆಯ ಪದ್ದು ಪೂಜಾರ್ತಿ ಎಂಬವರ ಮಗ ಸುರೇಶ ಪೂಜಾರಿ (48) ಎಂದು ಗುರುತಿಸಲಾಗಿದೆ.
ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ದೇವರು ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.