ಗೋಡ್ಸೆ ಭಾರತದ ಪ್ರಥಮ ಭಯೋತ್ಪಾದಕ | ಅಸಾದುದ್ದೀನ್ ಒವೈಸಿ
ಕಲಬುರಗಿ: ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದು, ಇದೀಗ ರೈತರನ್ನು ಕೊಲ್ಲಲು ಗೋಡ್ಸೆ ಅನುಯಾಯಿಗಳು ಸಂಚು ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಇಲ್ಲಿನ ಮೊಘಲ್ ಫಂಕ್ಷನ್ ಹಾನ್ ನಿಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರು ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕುಸಿದಿದ್ದು, ಮೂಲೆ ಗುಂಪಾಗಿದೆ. ಅವರಿಂದ ಏನು ಮಾಡಲೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಓವೈಸಿಯನ್ನು ಮಾತ್ರವೇ ವಿರೋಧಿಯಾಗಿ ಅವರು ನೋಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಅಧಿಕಾರದ ಆಸೆಯಿಂದ ಬರುವವರು ಬೇಕಾಗಿಲ್ಲ. ಮುಸ್ಲಿಮ್, ದಲಿತರಿಗಾಗಿ ಹೋರಾಡುವ ನಾಯಕರು ಬೇಕು. ಸಮುದಾಯದ ಧ್ವನಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವವರು ನಮಗೆ ಬೇಕಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬೀದರ್ ಹಾಗೂ ಕಲಬುರಗಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಹಾಗಾಗಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸಕ್ಕೆ ಕಾರ್ಯಕರ್ತರು ಮುಂದಾಗ ಬೇಕು ಎಂದು ಓವೈಸಿ ಕರೆ ನೀಡಿದರು.
ನಾವು ಕಾಂಗ್ರೆಸ್ ನ ಬಿ ಟೀಮ್ ಎಂದು ಹೇಳುತ್ತಿರುವ ಕಾಂಗ್ರೆಸ್ ನವರೇ, ಕರ್ನಾಟಕದಲ್ಲಿ ಶಾಸಕರು ಕಾಂಗ್ರೆಸ್ ಬಿಟ್ಟು ಹೋಗುವಾಗ ನನಗೆ ಹೇಳಿ ಹೋಗಿದ್ದರಾ? ಎಂದು ಪ್ರಶ್ನಿಸಿದ ಅವರು ಕುಮಾರಸ್ವಾಮಿ ಅವರ ಬಗ್ಗೆಯೂ ಪ್ರಸ್ತಾಪಿಸಿ, ಕುಮಾರಸ್ವಾಮಿ ರಾಜಕೀಯ ಲಾಭಕ್ಕಾಗಿ ಮಾರಿಕೊಳ್ಳುವವರು ಎಂದು ಹೇಳಿದರು.