ತೆಲಂಗಾಣ ಉಪಮುಖ್ಯಮಂತ್ರಿ ಮನೆಯಲ್ಲಿ ಚಿನ್ನದ ಬಿಸ್ಕೆಟ್ ನಗದು, ಆಭರಣ ಕಳ್ಳತನ
ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಅವರ ಮನೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2.2 ಲಕ್ಷ ರೂ ನಗದು, ಚಿನ್ನದ ಬಿಸ್ಕತ್ತು ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಿಹಾರದ ರೋಶನ್ ಕುಮಾರ್ ಮಂಡಲ್ ಮತ್ತು ಉದಯ್ ಕುಮಾರ್ ಠಾಕೂರ್ ಎಂದು ಗುರುತಿಸಲ್ಪಟ್ಟ ಶಂಕಿತರನ್ನು ಪಶ್ಚಿಮ ಬಂಗಾಳದ ಖರಗ್ಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಶೋಧ ಮಾಡುತ್ತಿರುವ ಸಮಯದಲ್ಲಿ ಪ್ಲಾಟ್ ಫಾರ್ಮ್ ನಲ್ಲಿ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿದ ನಂತರ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳಿಂದ 2.2 ಲಕ್ಷ ನಗದು, 100 ಗ್ರಾಂ ಚಿನ್ನದ ಬಿಸ್ಕತ್ತು ಮತ್ತು ಬ್ರಿಟಿಷ್ ಪೌಂಡ್ ಗಳು, ಯುಎಇ ದಿರ್ಹಾಮ್ ಗಳು ಮತ್ತು ಸ್ವಿಸ್ ಫ್ರಾಂಕ್‌ಗಳನ್ನು ಒಳಗೊಂಡ ವಿದೇಶಿ ಕರೆನ್ಸಿ ಸೇರಿದಂತೆ ಕದ್ದ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ವಿಕ್ರಮಾರ್ಕ ಅಧಿಕೃತ ಪ್ರವಾಸದಲ್ಲಿದ್ದಾಗ ಕಳ್ಳತನ ಸಂಭವಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth