ಚಿನ್ನ ಖರೀದಿಗೆ ಮುಗಿಬಿದ್ದ ಜನ: ಮತ್ತಷ್ಟು ಇಳಿಕೆಯಾಯ್ತು ಗೋಲ್ಡ್,  ಸಿಲ್ವರ್  ರೇಟ್ - Mahanayaka

ಚಿನ್ನ ಖರೀದಿಗೆ ಮುಗಿಬಿದ್ದ ಜನ: ಮತ್ತಷ್ಟು ಇಳಿಕೆಯಾಯ್ತು ಗೋಲ್ಡ್,  ಸಿಲ್ವರ್  ರೇಟ್

gold rate today
16/03/2022

ಬೆಂಗಳೂರು: ಸತತ ಎರಡನೇ ದಿನವಾದ ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,100 ರೂ. ಇತ್ತು. ಇಂದು 500 ರೂ. ಕಡಿಮೆಯಾಗಿ 47,600 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,470 ರೂ. ಇತ್ತು. ಇಂದು 540 ರೂ. ಇಳಿಕೆಯಾಗಿ 51,930 ರೂ. ಆಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 52,470 ರೂ. ಇತ್ತು. ಇಂದು 540 ರೂ. ಇಳಿಕೆಯಾಗಿ 51,930 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 48,100 ರೂ. ಇತ್ತು. ಇಂದು 500 ರೂ. ಕಡಿಮೆಯಾಗಿ 47,600 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈನಲ್ಲಿ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರದಿಂದ 53 ಸಾವಿರದ ಆಸುಪಾಸಿನಲ್ಲೇ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರದ ಆಸುಪಾಸಿನಲ್ಲೇ ಇದೆ.

ದೇಶದಲ್ಲಿಂದು ಚಿನ್ನದ ಬೆಲೆ ಕಡಿಮೆಯಾದಂತೆ ಬೆಳ್ಳಿ ದರ (Silver Rate) ಸಹ ಇಳಿಕೆಯಾಗಿದೆ.. ನಿನ್ನೆ 1 ಕೆಜಿ ಬೆಳ್ಳಿಗೆ 70,000 ರೂ.ಇಂದು 1,000 ರೂ. ಕಡಿಮೆಯಾಗಿ 69,000 ರೂ. ಆದರೆ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 72,800 ರೂ. ಆಗಿದೆ. ಇದೇ ರೀತಿ ಚೆನ್ನೈ, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಮಧುರೈನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 72,800 ರೂ. ಆಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕನ್ನಡ ಚಿತ್ರರಂಗ ನಟ, ನಿರ್ದೇಶಕ‌, ನಿರ್ಮಾಪಕ ಎಸ್.ನಾರಾಯಣ್ ರಾಜಕೀಯಕ್ಕೆ ಎಂಟ್ರಿ

ಸ್ನೇಹಿತನ ತಂಗಿ ಜತೆ ಫೋನ್ ನಲ್ಲಿ ಮಾತನಾಡುತ್ತಿದ್ದ ಯುವಕನ ದುರಂತ ಅಂತ್ಯ!

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ವಿದ್ಯಾರ್ಥಿನಿ

ದೆಹಲಿಯ ಹೊರಗೆ ಮೊದಲ ಬಾರಿಗೆ AAP ಸಿಎಂ;  ಇಂದು ಪಂಜಾಬ್ ನಲ್ಲಿ ಭಗವಂತ್ ಮಾನ್ ಅಧಿಕಾರಕ್ಕೆ

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ: ನಿವೃತ್ತ ಎಸ್‌ ಐ ಪತ್ನಿ ಸಾವು

OTT ಗೆ ಸೆಲ್ಯೂಟ್;  ದುಲ್ಕರ್ ನಿರ್ಮಾಣ ಕಂಪನಿಯನ್ನು ಬ್ಯಾನ್ ಮಾಡಿದ ಫಿಯೋಕ್

ಇತ್ತೀಚಿನ ಸುದ್ದಿ