ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಸಿದ್ದರಾಮಯ್ಯ ಏನು ಹೇಳಿದ್ರು ಗೊತ್ತಾ?

siddaramahia
24/05/2021

ಬೆಂಗಳೂರು: ಚಿಕ್ಕಮಗಳೂರಿನ ಮೂಡಿಗೆರೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಲಿತ ಯುವಕನಿಗೆ ಬೇರೊಬ್ಬರ ಆರೋಪಿಯ ಮೂತ್ರ ಕುಡಿಸಿದ ಪಿಎಸ್ ಐ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಅವನನ್ನು ಈಗ ಸಸ್ಪೆಂಡ್ ಮಾಡಿದ್ದಾರೆ. ಬಲವಂತವಾಗಿ ಮೂತ್ರ ಕುಡಿಸೋದು ಅಮಾನವೀಯ. ಅದು ಒಬ್ಬ ಪಿಎಸ್ ಐ ಮಾಡಿರೋದು ಸರಿಯಲ್ಲ. ರಕ್ಷಣೆ ಕೊಡಬೇಕಾದವರೆ ಈ ರೀತಿ ಮಾಡಿದರೆ ಹೇಗೆ? ಮೊದಲು ಕ್ರಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಒತ್ತಾಯ ಮಾಡಿದ್ದಾರೆ.

ಕಿರುಗುಂದ ಗ್ರಾಮದ ದಲಿತ ಯುವಕನಿಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಬಂಧಿಸಿ, ಲಾಕಪ್ ನಲ್ಲಿ ಚಿತ್ರ ಹಿಂಸೆ ನೀಡಿ, ಇನ್ನೋರ್ವ ಆರೋಪಿಯ ಮೂತ್ರವನ್ನು ಕುಡಿಸಿದ ಪಿಎಸ್ ಐ ಅರ್ಜುನ್, ಜಾತಿ ನಿಂದಿಸಿ ವಿಕೃತಿ ಮೆರೆದಿದ್ದ. ಈತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವ್ಯಾಪಕ ಆಕ್ರೋಶಗಳು ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version