ನೆರ್ಟ್ ವರ್ಕ್ ಸಮಸ್ಯೆಯಿಂದ ಕಂಗೆಟ್ಟಿದ್ದ ಮಲೆನಾಡಿಗರಿಗೆ ಸಿಹಿಸುದ್ದಿ
ಕೊಟ್ಟಿಗೆಹಾರ: ಮೊಬೈಲ್ ನೆರ್ಟ್ ವರ್ಕ್ ಸಮಸ್ಯೆಯಿಂದ ಕಂಗೆಟ್ಟಿದ್ದ ಮಲೆನಾಡಿಗರಿಗೆ ಇದೀಗ ಸಿಹಿ ಸುದ್ದಿಯೊಂದು ದೊರಕಿದೆ. ಜಿಲ್ಲೆಯ ಐದು ತಾಲೂಕಿನ ಜನರಿಗೆ ಸಂಪರ್ಕಕ್ಕೆ ಇದೀಗ ಹೊಸ ಆಶಾಕಿರಣ ಸಿಕ್ಕಿದೆ.
ಗುಡ್ಡಗಾಡು ಪ್ರದೇಶದಲ್ಲಿರುವ ಜನರ ಮೊಬೈಲ್ ಗೆ ನೆರ್ಟ್ ವರ್ಕ್ ಸಿಗುವ ಭಾಗ್ಯ ಕೊನೆಗೂ ಹತ್ತಿರವಾಗುತ್ತಿದೆ. ನೆರ್ಟ್ ವರ್ಕ್ ಸಮಸ್ಯೆಯಿಂದ ಮಲೆನಾಡಿನಲ್ಲಿ ಸಂಪರ್ಕವೇ ಅಸಾಧ್ಯ ಎನ್ನುವಂತಾಗಿತ್ತು. ಕೊನೆಗೂ ಗುಡ್ಡಗಾಡಿನ ಜನರ ಹಲವು ವರ್ಷಗಳ ಬೇಡಿಕೆ ಈಡೇರುವ ಲಕ್ಷಣ ಕಂಡು ಬಂದಿದೆ. ಜಿಲ್ಲೆಯ ಐದು ತಾಲೂಕಿನ ಜನರಿಗೆ ನೆಟ್ ವರ್ಕ್ ಭಾಗ್ಯ ಸಿಗಲಿದೆ. ಅಲ್ಲದೇ ಇಂಟರ್ ನೆಟ್ ಸೌಲಭ್ಯ ಬಳಕೆಗೂ ಅನುಕೂಲವಾಗಲಿದೆ.
BSNL ಟವರ್ ಗಳಿಗೆ ಸ್ಯಾಟಲೈಟ್ ಲಿಂಕ್ ಆಗಲಿದ್ದು, 1ರಿಂದ 3 ಕಿಲೋ ಮೀಟರ್ ವರೆಗೂ ನೆಟ್ ವರ್ಕ್ ಸಿಗಲಿದೆ. ಮೂಡಿಗೆರೆ ಅಲೇಕಾನ್ ಹೊರಟ್ಟಿಯಲ್ಲಿ ಪ್ರಾಯೋಗಿಕ ಟವರ್ ಗೆ ಲಿಂಕ್ ಮಾಡಲಾಗುವುದು ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್ ಆರ್ ಪುರ, ಚಿಕ್ಕಮಗಳೂರು ತಾಲೂಕಿನಲ್ಲಿ ಅಳವಡಿಕೆ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಟವರ್ ಗಳಿಗೆ ಸ್ಯಾಟಲೈಟ್ ಲಿಂಕ್ ನೀಡುವುದರಿಂದ ದೂರವಾಣಿ ಸಂಪರ್ಕ ಸಮಸ್ಯೆಗೆ ಮುಕ್ತಿ ದೊರೆಯುತ್ತದೆಯೇ ಎಂದು ಕಾದುನೋಡಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7