ವಾಟ್ಸಾಪ್, ಫೇಸ್ ಬುಕ್ ಬಳಕೆದಾರರಿಗೆ ಸಿಹಿಸುದ್ದಿ
ವಾಟ್ಸಾಪ್, ಫೇಸ್ ಬುಕ್ ನೊಂದಿಗೆ ಫೆಬ್ರವರಿ 8ರೊಳಗೆ ತಮ್ಮ ಡೇಟಾ ಹಂಚಿಕೊಳ್ಳಬೇಕು ಎಂದು ಬಳಕೆದಾರರನಿಗೆ ನಿಯಮ ಹೇರಿದ್ದ ಕಂಪೆನಿಯು ಇದೀಗ ಲಕ್ಷಾಂತರ ಜನರು ವಾಟ್ಸಾಪ್, ಫೇಸ್ ಬುಕ್ ನಿಂದ ಇತರ ಸಾಮಾಜಿಕ ಜಾಲತಾಣಗಳತ್ತ ತೆರಳುತ್ತಿದ್ದಂತೆಯೇ, ಕಂಗಾಲಾದ ವಾಟ್ಸಾಪ್, ಫೇಸ್ಬುಕ್ ನೊಂದಿಗೆ ಡೇಟಾ ಹಂಚಿಕೊಳ್ಳಲು ಸಂಬಂಧಿಸಿದ ನಿಯಮಗಳ ನವೀಕರಣ ಸ್ವೀಕರಿಸುವ ಗಡುವನ್ನು ಮುಂದೂಡಿದೆ.
ವಾಟ್ಸಾಪ್ , ಫೇಸ್ ಬುಕ್ ನ ನಿಯಮಗಳಿಂದಾಗಿ ಗೌಪ್ಯತೆ ಮತ್ತು ಸುರಕ್ಷತೆಯ ಭೀತಿ ಉಂಟಾಗಿದ್ದು, ಪಾರ ಸಂಖ್ಯೆಯ ಜನ ಟೆಲಿಗ್ರಾಂ ಮತ್ತು ಸಿಗ್ನಲ್ ಮೊರೆ ಹೋಗಿದ್ದಾರೆ. ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಡೇಟಾ ಹಂಚಿಕೆ ಬದಲಾವಣೆಯನ್ನು ವಾಟ್ಸಾಪ್ ಮುಂದೂಡಿದೆ ಎಂದು ವರದಿಯಾಗಿದೆ.
ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸೇರಿದಂತೆ ಅನೇಕರು ವಾಟ್ಸಾಪ್ ಖಾಸಗಿ ಮಾಹಿತಿ ಹಂಚಿಕೊಳ್ಳುತ್ತದೆ ಎಂದು ಕಿಡಿಕಾರಿದ್ದರು. ಟೆಲಿಗ್ರಾಂ ಮತ್ತು ಸಿಗ್ನಲ್ ಆಪ್ ಡೌನ್ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಬಾರಿ ಹೆಚ್ಚಾಗಿದೆ. ಇದರಿಂದ ಕಂಗಾಲಾದ ವಾಟ್ಸಾಪ್ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಡೇಟಾ ಹಂಚಿಕೆ ನಿಯಮ ಗಡುವನ್ನು ರದ್ದುಗೊಳಿಸಿದೆ ಎಂದು ಹೇಳಲಾಗಿದೆ.