ಗುಡ್ ನ್ಯೂಸ್ ನೀಡಿದ ಮೋಹಕ ತಾರೆ: ಹೊಸ ಚಿತ್ರ ಘೋಷಿಸಿದ ರಮ್ಯಾ: ಹೀರೋ ಯಾರು? - Mahanayaka
12:59 AM Wednesday 25 - December 2024

ಗುಡ್ ನ್ಯೂಸ್ ನೀಡಿದ ಮೋಹಕ ತಾರೆ: ಹೊಸ ಚಿತ್ರ ಘೋಷಿಸಿದ ರಮ್ಯಾ: ಹೀರೋ ಯಾರು?

ramya
05/10/2022

ಸ್ಯಾಂಡಲ್ ವುಡ್ ನ ಕ್ವೀನ್, ಮೋಹಕ ತಾರೆ ನಟಿ ರಮ್ಯಾ ಯಾವಾಗ ಮತ್ತೆ ನಟಿಸಲಿದ್ದಾರೆ ಎನ್ನುವ ಹಲವು ಪ್ರಶ್ನೆಗಳು ಕೇಳಿ ಬಂದಿತ್ತು. ಅಭಿಮಾನಿಗಳ ಹಲವು ಸಮಯಗಳ ಕೋರಿಕೆ ಇದೀಗ ಈಡೇರುವಂತೆ ಕಂಡು ಬಂದಿದೆ.

ಕರಾವಳಿಯ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ ಜೊತೆಗೆ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಗೆ ಪ್ರವೇಶಿಸಲಿದ್ದು, ‘ಸ್ವಾತಿ ಮುತ್ತಿನ ಮಳೆಹನಿಯೇ’ ಎಂಬ ಚಿತ್ರದ ಮೂಲಕ ರಮ್ಯಾ ಕಂಬ್ಯಾಕ್ ಆಗಲಿದ್ದಾರೆ.

ಇತ್ತೀಚೆಗಷ್ಟೆ ಮೋಹಕ ತಾರೆ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಎಂಟ್ರಿಯಾಗಿದ್ರು, ತಮ್ಮದೇ ಆದ ಆ್ಯಪಲ್ ಬಾಕ್ಸ್ ಎಂಬ ಸಂಸ್ಥೆಯ ಮೂಲಕ ಹಲವು ಚಿತ್ರಗಳು ಮತ್ತು ವೆನ್ ಸೀರೀಸ್ ಮಾಡುವುದಾಗಿ ಅವರು ಘೋಷಿಸಿದ್ದರು.

ಕಾಂತಾರ ಸಿನಿಮಾ ನೋಡಲು ಬಂದಿದ್ದ ರಮ್ಯಾ ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಾಗಿ ಘೋಷಿಸಿದ್ದರು. ಇದೀಗ ಅಂತಿಮವಾಗಿ ಸ್ವಾತಿಮುತ್ತಿನ ಮಳೆ ಸುರಿಸಲು ರಮ್ಯಾ ಸಿದ್ಧವಾಗಿದ್ದು, ಕರಾವಳಿಯ ಬಹುಮುಖ ಪ್ರತಿಭೆ ರಾಜ್ ಬಿ. ಶೆಟ್ಟಿಗೆ ಜೋಡಿಯಾಗಿ ನಟಿಸಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ